ವೀರಾಜಪೇಟೆ, ಸೆ. 25: ವೀರಾಜಪೇಟೆಯ ಸುಂಕದಕಟ್ಟೆಯ ಕೊಡಗು ದಂತ ಮಹಾ ವಿದ್ಯಾಲಯದಿಂದ ಆರ್ಜಿ ಗ್ರಾಮದ ಸೇತುವೆಯವರೆಗೆ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ತಲಾ 30 ಅಡಿಗಳಿಗೆ ಸೀಮಿತಗೊಂಡಂತೆ (ಒಟ್ಟು 60 ಅಡಿಗಳಷ್ಟು) ಅಗಲೀಕರಣ ಗೊಳಿಸಲು ಇಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರ ಸಮ್ಮುಖದಲ್ಲಿ ನಡೆದ ಸಾರ್ವಜನಿಕ, ಕಟ್ಟಡ ಮಾಲೀಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ತೀರ್ಮಾನಿ¸ Àಲಾಯಿತು.

ವೀರಾಜಪೇಟೆಯ ಸಂತ ಅನ್ನಮ್ಮ ದ್ವಿಶತಮಾನೋತ್ಸವ ಸಭಾಂಗಣದಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ sಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕೆ.ಜಿ.ಬೋಪಯ್ಯ ಅವರು ಕಟ್ಟಡ ಮಾಲೀಕರ ಅಹವಾಲು, ಮನವಿಗಳನ್ನು ನೇರವಾಗಿ ಸ್ವೀಕರಿಸಿದ ನಂತರ ಕೊಡಗು ಗುಡ್ಡಗಾಡು ಪ್ರದೇಶವಾಗಿರುವದರಿಂದ ರಸ್ತೆ ಅಗಲೀಕರಣವನ್ನು ಕಾನೂನು ವೀರಾಜಪೇಟೆ, ಸೆ. 25: ವೀರಾಜಪೇಟೆಯ ಸುಂಕದಕಟ್ಟೆಯ ಕೊಡಗು ದಂತ ಮಹಾ ವಿದ್ಯಾಲಯದಿಂದ ಆರ್ಜಿ ಗ್ರಾಮದ ಸೇತುವೆಯವರೆಗೆ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ತಲಾ 30 ಅಡಿಗಳಿಗೆ ಸೀಮಿತಗೊಂಡಂತೆ (ಒಟ್ಟು 60 ಅಡಿಗಳಷ್ಟು) ಅಗಲೀಕರಣ ಗೊಳಿಸಲು ಇಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರ ಸಮ್ಮುಖದಲ್ಲಿ ನಡೆದ ಸಾರ್ವಜನಿಕ, ಕಟ್ಟಡ ಮಾಲೀಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ತೀರ್ಮಾನಿ¸ Àಲಾಯಿತು.ವೀರಾಜಪೇಟೆಯ ಸಂತ ಅನ್ನಮ್ಮ ದ್ವಿಶತಮಾನೋತ್ಸವ ಸಭಾಂಗಣದಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ sಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕೆ.ಜಿ.ಬೋಪಯ್ಯ ಅವರು ಕಟ್ಟಡ ಮಾಲೀಕರ ಅಹವಾಲು, ಮನವಿಗಳನ್ನು ನೇರವಾಗಿ ಸ್ವೀಕರಿಸಿದ ನಂತರ ಕೊಡಗು ಗುಡ್ಡಗಾಡು ಪ್ರದೇಶವಾಗಿರುವದರಿಂದ ರಸ್ತೆ ಅಗಲೀಕರಣವನ್ನು ಕಾನೂನು ಮಾಡುವ ಜಾಗಕ್ಕೆ ದಾಖಲೆಗಳನ್ನು ಪರಿಶೀಲಿಸಿ ಅಧಿಕಾರಿಗಳು ಸರಕಾರವನ್ನು ಸಂಪರ್ಕಿಸಿ ಸಮ್ಮತಿಯ ಮೇರೆ ದಾಖಲೆಗಳಿಂದ ಅಧಿಕೃತವಾಗಿ ಎನ್ನುವ ಅರ್ಹ ಜಾಗಕ್ಕೆ ಪರಿಹಾರ ನಿಗಧಿಪಡಿಸಿ ಪರಿಹಾರ ಕಲ್ಪಿಸಲಾಗುವದು. ರಸ್ತೆ ಅಗಲೀಕರಣ ಪಟ್ಟಣದ ಅಭಿವೃದ್ಧಿ ಕಾರ್ಯಕ್ರಮ ವಾಗಿದೆ. ಎಲ್ಲರೂ ಸಹಕರಿಸಬೇಕು ಎಂದರು.

(ಮೊದಲ ಪುಟದಿಂದ) ವೀರಾಜಪೇಟೆ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಡಾ. ಎಂ.ಎ. ಪಾರ್ಥ, ಉದ್ಯಮಿ ಕೆ.ಡಬ್ಲ್ಯು. ಬೋಪಯ್ಯ, ಕರುಣ್ ಕಾಳಯ್ಯ, ಎನ್.ಯು. ಮೋಹನ್, ಹಿರಿಯ ವಕೀಲರಾದ ಎನ್.ಜಿ.ಕಾಮತ್, ಟಿ.ಪಿ. ಕೃಷ್ಣ, ಎಂ.ಎಂ. ಶಶಿಧರನ್, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಡಿ.ಪಿ. ರಾಜೇಶ್, ಎಸ್.ಎಚ್. ಮತೀನ್, ಸಿ.ಕೆ. ಪೃಥ್ವಿನಾಥ್, ಮಹಮ್ಮದ್ ರಾಫಿ ಮಾತನಾಡಿದರು.

ಬಹುತೇಕ ಮಂದಿ ವೀರಾಜಪೇಟೆ ಸಣ್ಣ ಪಟ್ಟಣವಾಗಿದ್ದು ಕಳೆದ 1974-75 ಹಾಗೂ 1977 ರಲ್ಲಿಯೂ ರಸ್ತೆ ಅಗಲೀಕರಣವಾಗಿದೆ. ಪುನಃ ಈಗಿನ ರಸ್ತೆ ಅಗಲೀಕರಣದಿಂದ ಸಾಕಷ್ಟು ಮಂದಿ ಮನೆ ಮಠ ಅಂಗಡಿ ಕಳೆದುಕೊಂಡು ಬೀದಿ ಪಾಲಾಗಲಿ ದ್ದಾರೆ. ಈಗಾಗಲೇ ಅತಿವೃಷ್ಠಿಯಿಂದ ಜನರು ಬಳಲಿದ್ದು ಆದಾಯವು ಕುಂಠಿತಗೊಂಡಿದೆ. ಈ ಸಂದರ್ಭದಲ್ಲಿ ರಸ್ತೆ ಅಗಲೀಕರಣ ಅವಶ್ಯಕತೆ ಇಲ್ಲವೆಂದು ಆಕ್ಷೇಪಿಸಿದರು.. ಈಚೆಗೆ ಬೆಟ್ಟ ಬಿರುಕುಗೊಂಡಿರುವದನ್ನು ಪರೀಕ್ಷಿಸಲು ಬಂದ ಬೆಂಗಳೂರಿನ ಭೂ ವಿಜ್ಞಾನಿಗಳು ಬೆಟ್ಟದಲ್ಲಿ ವಾಸಿಸುವ ನಿವಾಸಿಗಳನ್ನು ಸ್ಥಳಾಂತರಿ ಸುವಂತೆಯೂ, ವೀರಾಜಪೇಟೆ ಗುಡ್ಡಗಾಡು ಪ್ರದೇಶವಾಗಿದ್ದು ಪಟ್ಟಣವು ಭಾರೀ ದೊಡ್ಡ ಬೆಟ್ಟದ ವ್ಯಾಪ್ತಿಯಲ್ಲಿರು ವದರಿಂದ ಸಮೀಕ್ಷೆಯ ಪ್ರಕಾರ ಈ ಸಣ್ಣ ಪಟ್ಟಣದಲ್ಲಿ ರಸ್ತೆ ಅಗಲೀಕರಣ ಅಗತ್ಯವಿಲ್ಲವೆಂದು ವರದಿಯಲ್ಲಿ ತಿಳಿಸಿರುವದರಿಂದ ಅಧಿಕಾರಿಗಳು ಈ ವರದಿಯನ್ನು ಆಧರಿಸಿ ರಸ್ತೆ ಅಗಲೀಕರಣವನ್ನು ಕೈ ಬಿಡುವಂತೆ ಕೋರಿದರು.

ವೀರಾಜಪೇಟೆ ಗ್ರಾಮಾಂತರ ಪ್ರದೇಶದಿಂದ ಬಂದಿದ್ದ ಕೆಲವರು ವೀರಾಜಪೇಟೆ ಪಟ್ಟಣದ ರಸ್ತೆ ಇಕ್ಕಾಟ್ಟಾಗಿದ್ದು ಪ್ರತಿನಿತ್ಯ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ರಸ್ತೆಯನ್ನು ಅಗಲೀಕರಣ ಗೊಳಿಸಬೇಕು ಎಂದು ಸಭೆಯಲ್ಲಿ ತಮ್ಮ ಅಹವಾಲನ್ನು ಹೇಳಿದರು.

ವೀರಾಜಪೇಟೆ ಪಟ್ಟಣ ಪಂಚಾಯಿತಿ ವತಿಯಿಂದ ಏರ್ಪಡಿಸಿದ್ದ ಸಭೆಯಲ್ಲಿ ಮುಖ್ಯಾಧಿ ಕಾರಿ ಎ.ಎಂ. ಶ್ರೀಧರ್ ಅವರು ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೋಕೋಪ ಯೋಗಿ ಇಲಾಖೆಯ ಸಹಾಯಕ ಅಭಿಯಂತರ ಎಂ.ಸುರೇಶ್ ಅವರು ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ವೀಡಿಯೋ ಚಿತ್ರೀಕರಣ ಸಮೇತ ಸಂಕ್ಷಿಪ್ತ ಮಾಹಿತಿ ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಶಶಿ ಸುಬ್ರಮಣಿ, ತಾಲೂಕು ಕಚೇರಿಯ ಶಿರಸ್ತೆದಾರ್ ಎಚ್.ಕೆ. ಪೊನ್ನು, ಪಟ್ಟಣದ ಪ್ರಭಾರ ಉಪ ನಿರೀಕ್ಷಕರಾದ ವೀಣಾನಾಯಕ್, ಟೌನ್ ಪ್ಲಾನಿಂಗ್ ಅಧಿಕಾರಿ ಸಂಜೀವ್ ಪಟ್ಟಣ ಪಂಚಾಯಿತಿ ಸದಸ್ಯರುಗಳು ಹಾಜರಿದ್ದರು.