ಮಡಿಕೇರಿ, ಸೆ. 25: ಜನೋತ್ಸವ ಮಡಿಕೇರಿ ದಸರಾ ಪ್ರಯುಕ್ತ ಅ. 5 ರಂದು ಮಡಿಕೇರಿ ಪತ್ರಿಕಾ ಭವನದಲ್ಲಿ ಪತ್ರಕರ್ತರ ಜಿಲ್ಲಾಮಟ್ಟದ ಒಳಾಂಗಣ ಕ್ರೀಡಾ ಸ್ಪರ್ಧೆ ಆಯೋಜಿಸಲಾಗಿದೆ.
ಕೊಡಗು ಪ್ರೆಸ್ ಕ್ಲಬ್ ಹಾಗೂ ಮಡಿಕೇರಿ ನಗರ ದಸರಾ ಕ್ರೀಡಾ ಸಮಿತಿ ಸಂಯುಕ್ತಾಶ್ರಯದಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಮಡಿಕೇರಿ ನಗರ ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಬಿ.ಎಂ. ಹರೀಶ್ ಹಾಗೂ ಕೊಡಗು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಆರ್. ಸುಬ್ರಮಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪತ್ರಕರ್ತರು ಹಾಗೂ ಪತ್ರಕರ್ತೆಯರಿಗೆ ಪ್ರತ್ಯೇಕ ವಿಭಾಗದಲ್ಲಿ ಚೆಸ್, ಕೇರಂ, ಟೇಬಲ್ ಟೆನ್ನಿಸ್ ಸ್ಪರ್ಧೆ ನಡೆಯಲಿದೆ. ಕೇರಂ ಮತ್ತು ಟೇಬಲ್ ಟೆನ್ನಿಸ್ನಲ್ಲಿ ಸಿಂಗಲ್ ಮತ್ತು ಡಬಲ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಡಬಲ್ಸ್ನಲ್ಲಿ ಪಾಲ್ಗೊಳ್ಳುವವರು ತಮ್ಮ ಜೋಡಿಯನ್ನು ತಾವೇ ಆಯ್ಕೆ ಮಾಡಿಕೊಳ್ಳಬೇಕು. ಚೆಸ್... ಎಂ.ಎನ್. ನಾಸಿರ್, ಟೇಬಲ್ ಟೆನ್ನಿಸ್... ಕುಪ್ಪಂಡ ದತ್ತಾತ್ರಿ, ಕೇರಂ.... ರೆಜಿತ್ಕುಮಾರ್ ಗುಹ್ಯ, ಪತ್ರಕರ್ತೆಯರ ವಿಭಾಗದ ಸ್ಪರ್ಧೆ ಜವಾಬ್ದಾರಿಯನ್ನು ಕಿಶೋರ್ ರೈ ಕತ್ತಲೆಕಾಡು ನಿರ್ವಹಿಸಲಿದ್ದಾರೆ.
ಸ್ಪರ್ಧಿಗಳು ತಾ. 30 ರೊಳಗೆ ಪತ್ರಿಕಾ ಭವನದಲ್ಲಿ ಹೆಸರು ನೋಂದಾಯಿಸಿ ಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 8884432052 ಅನ್ನು ಸಂಪರ್ಕಿಸಬಹುದು.