ಗೋಣಿಕೊಪ್ಪ ವರದಿ, ಸೆ. 25: ಅ. 2 ರಂದು ನಡೆಯುವ ಗಾಂಧಿ ಜಯಂತಿಯಂದು ಗೋಣಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಸ್ಪಿರಿಟ್ ಆಫ್ ಫ್ರೀಡಂ ರನ್ ರಸ್ತೆ ಓಟ ಸ್ಪರ್ಧೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ನಿತಿ ಪೂಣಚ್ಚ ತಿಳಿಸಿದ್ದಾರೆ.
ಅಂದು ಬೆಳಗ್ಗೆ 7 ಗಂಟೆಯಿಂದ ಪೊನ್ನಂಪೇಟೆಯಿಂದ ಗೋಣಿಕೊಪ್ಪ ಉಮಾಮಹೇಶ್ವರಿ ದೇವಸ್ಥಾನದವರೆಗೆ ಓಟ ನಡೆಯಲಿದೆ. ಲೆ.ಕ. (ನಿವೃತ್ತ) ಪಟ್ಟಡ ಕರುಂಬಯ್ಯ ಉದ್ಘಾಟಿಸಲಿದ್ದಾರೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪುರುಷರು, ಮಹಿಳೆಯರಿಗೆ ಸಾರ್ವಜನಿಕ ವಿಭಾಗ, ಹಿರಿಯರ ವಿಭಾಗ, ಪ್ರಾಥಮಿಕ ಶಾಲೆ, ಪ್ರೌಢ, ಕಾಲೇಜು ವಿಭಾಗದವರು ಪಾಲ್ಗೊಳ್ಳಬಹುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನಂತರ ನಡೆಯುವ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಈಗಾಗಲೇ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಾಕ್‍ಚಾತುರ್ಯ ಸ್ಪರ್ಧೆ, ದೇಶಭಕ್ತಿ ಗೀತೆ, ಕವನ ವಾಚನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ ಖಜಾಂಜಿ ಅಲ್ಲುಮಾಡ ಸುನಿಲ್, ನಿರ್ದೇಶಕ ಬಾಲಕೃಷ್ಣ, ಲಯನ್ಸ್ ಟ್ರಸ್ಟ್ ಮುಖ್ಯಸ್ಥ ಕೆ. ಎಸ್. ಚಂಗಪ್ಪ, ಕಾರ್ಯದರ್ಶಿ ಧನು ಉತ್ತಯ್ಯ ಉಪಸ್ಥಿತರಿದ್ದರು.