*ಗೋಣಿಕೊಪ್ಪಲು, ಸೆ. 25: 41ನೇ ವರ್ಷದ ಗೋಣಿಕೊಪ್ಪಲು ದಸರಾ ಜನೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿಯನ್ನು ಗ್ರಾ.ಪಂ. ಸಭಾಂಗಣದಲ್ಲಿ ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಕೆ.ಜಿ. ರಾಮಕೃಷ್ಣ ಅನಾವರಣಗೊಳಿಸಿದರು.

ತಾ. 29 ರಿಂದ ಅ. 8ರವರೆಗೆ ವಿವಿಧ ರಸಮಂಜರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ ಎಂದು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಶ್ರೀಧರ್ ನೆಲ್ಲಿತಾಯ ತಿಳಿಸಿದ್ದಾರೆ.

ತಾ. 29ರಂದು ಸ್ಥಳೀಯ ಕಾರ್ಯಕ್ರಮದಲ್ಲಿ ಸಂಜೆ 6:30ರಿಂದ 7:30ರವರೆಗೆ ಶ್ರೀ. ಉಮಾಮಹೇಶ್ವರಿ ಭಜನಾ ಮಂಡಳಿ ಇವರಿಂದ ಭಜನೆ, 8:30ರಿಂದ 9:30ರವರೆಗೆ ವಿದ್ಯಾಶ್ರೀ ನಾಟ್ಯಸಂಕಲ್ಪ ತಂಡದಿಂದ ಭರತನಾಟ್ಯ, 9:30 ರಿಂದ 11:30ರವರೆಗೆ ಬಿಗ್ ಬಾಸ್ ಖ್ಯಾತಿಯ ಮೈಸೂರಿನ ಸುಮರಾಜ್ ಕುಮಾರ್ ಅವರಿಂದ ಮಾತನಾಡುವ ಗೊಂಬೆ, ಜಾದು ನಡೆಯಲಿದೆ. ತಾ. 30 ರಂದು 6:30ರಿಂದ 7:30ರ ತನಕ ಅಮ್ಮತ್ತಿ ಹೇಮಾವತಿ ನಾಟ್ಯಾಂಜಲಿ ನೃತ್ಯ ಸಂಗೀತ ಶಾಲೆಯವರಿಂದ ಭರತನಾಟ್ಯ, ಜಾನಪದ, ಪಾಶ್ಚಾತ್ಯ ನೃತ್ಯ, 8:30ರಿಂದ 9:30ರವರೆಗೆ ಅಮ್ಮತ್ತಿ ಸುರಕ್ಷ ತಂಡದಿಂದ ಭರತನಾಟ್ಯ, 9:30 ರಿಂದ 11:30ರವರೆಗೆ ಚಲನಚಿತ್ರ ಹಾಗೂ ಕಿರುತೆರೆ ನಟ ಶ್ರೀಹರಿ ಅವರಿಂದ ಹಾಡಿನೊಳಗೆ ಹಾಸ್ಯ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಅ. 1 ರಂದು ಸಂಜೆ 6:30ರಿಂದ 6:45ರ ವರೆಗೆ ಸೃಜನ್ ರಾಧಕೃಷ್ಣ ಇವರಿಂದ ಹಾಡುಗಾರಿಕೆ, 6:45 ರಿಂದ 7:30ರ ವರೆಗೆ ನಿನಾದ ನೃತ್ಯ ಶಾಲೆಯಿಂದ ನಾಟ್ಯ ಮತ್ತು ಮಳವಂಡ ರಜನಿ ಬಿಂದು ಇವರಿಂದ ವಾಲಗ ನೃತ್ಯ ಪ್ರದರ್ಶನ, 8:30 ರಿಂದ 9:30ರವರೆಗೆ ಕೊಡಗು ರಂಗಭೂಮಿ ತಂಡದ ಅಡ್ಡಂಡ ಸಿ. ಕಾರ್ಯಪ್ಪ ಅವರಿಂದ ಬದುಕು ಕೊಡವ ನಾಟಕ ಪ್ರದರ್ಶನ, 9:30 ರಿಂದ 11:30ರ ವರೆಗೆ ಖ್ಯಾತ ಕೊಡವ ಗಾಯಕ ಚಕ್ಕೇರ ಪಂಚಮ್ ಬೋಪಣ್ಣ ಅವರಿಂದ ಕೊಡವ ಗೀತೆಗಳ ಸಂಗಮ.

ಅ. 2ರಂದು 6:30 ರಿಂದ 7:30ರ ವರೆಗೆ ಮುತ್ತಾರ್ ಮುಡಿ ಸಾಂಸ್ಕೃತಿಕ ಕಲಾ ಬಳಗ ವತಿಯಿಂದ ಅರೆಭಾಷೆ ಸಾಂಸ್ಕೃತಿಕ ವೈಭವ ಮತ್ತು ನಾಪೆÇೀಕ್ಲು ವಸತಿ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ. ನಂತರ 8:30ರಿಂದ ಯುವ ದಸರಾ ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ಕಲಾ ಸಂಸ್ಕೃತಿ ವೈಭವ.

ಅ. 3ರಂದು 6:30 ರಿಂದ 7:30ರ ವರೆಗೆ ತೋರ ಗ್ರಾಮದ ಖ್ಯಾತ ಜಾನಪದ ಕಲಾವಿದೆ ಗೋಪಮ್ಮ ಇವರಿಂದ ಕೊಡವ ಸಂಸ್ಕೃತಿಯ ಉರುಟಿಕೊಟ್ಟ್ ಆಟ್ 7:30 ರಿಂದ 8:30ರ ವರೆಗೆ ವೀರಾಜಪೇಟೆ ಜಗನ್‍ಮೋಹನ್ ನಾಟ್ಯದವರಿಂದ ಶಾಸ್ತ್ರೀಯ ನಾಟ್ಯ, 9:30 ರಿಂದ ಅಂತರ್ರಾಷ್ಟ್ರಿಯ ಮಟ್ಟದ ಗಾಯಕ ಮೈಸೂರಿನ ಅಮ್ಮ ರಾಮಚಂದ್ರ ಇವರಿಂದ ಸಂಗೀತ ಕಾರ್ಯಕ್ರಮ.

ಅ. 4 ರಂದು 6:30 ರಿಂದ 7:30ರ ವರೆಗೆ ಶ್ರೀನಿವಾಸ ಸಂಗೀತ, ನೃತ್ಯ ಸಂಸ್ಥೆಯಿಂದ ದೇಶಭಕ್ತಿ ಗೀತೆ ಮತ್ತು ವಾದÀ್ಯ ಸಂಗೀತ, 7:30 ರಿಂದ 8:30ರ ವರೆಗೆ ಚಂದ್ರಶೇಖರ್ ಇವರಿಂದ ಸುಗಮ ಸಂಗೀತ, 9:30 ರಿಂದ ನಾಗರಹೊಳೆ ಅಮ್ಮಾಳೆ ಅಮ್ಮ ಕಲಾತಂಡದಿಂದ ಆದಿವಾಸಿಗಳ ಆಚಾರ ವಿಚಾರ, ಕಲೆ ಸಾಂಸ್ಕೃತಿಕ ಪ್ರದರ್ಶನ.

ಅ. 5 ರಂದು 6:30 ರಿಂದ 7:30ರ ವರೆಗೆ ಆಕಾಶವಾಣಿ ಕಲಾವಿದ ಬಿ.ಎಂ. ಗಣೇಶ್ ಅವರಿಂದ ಸುಗಮ ಸಂಗೀತ ಹಾಗೂ ಹಳೆ ಚಿತ್ರಗೀತೆಗಳ ಹಾಡುಗಾರಿಕೆ, 8:30ರಿಂದ 9:30ರ ವರೆಗೆ ಕಾವೇರಿ ಕಲಾಸಿರಿ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, 9:30 ರಿಂದ ರಿಫ್ಲೇಕ್ಷನ್ ಡ್ಯಾನ್ಸ್ ತಂಡದಿಂದ ನೃತ್ಯ ಕಾರ್ಯಕ್ರಮ.

ಅ. 6 ರಂದು 6:30 ರಿಂದ 7:30ರ ವರೆಗೆ ದುರ್ಗ ಸಂಗೀತ ಶಾಲೆ ಚಂದ್ರಕಲಾ ಮೂರ್ತಿಯವರಿಂದ ಗಾನ ಸುಧಾ, 7:30 ರಿಂದ 8:30ರ ತನಕ ವೀರಾಜಪೇಟೆ ಕಾವೇರಿ ಕಾಲೇಜು ವಿದ್ಯಾರ್ಥಿ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, 9:30 ರಿಂದ ಮೈಸೂರಿನ ಜಗ್ಗು ಜಾದುಗರ್ ಕಲಾ ತಂಡದಿಂದ ಮುಂಬೈ ಜಗ್ಲಿಂಗ್ ಜಾದು ಮತ್ತು ಸಂಗೀತ ಕಾರ್ಯಕ್ರಮ.

ಅ. 7 ರಂದು 6:30 ರಿಂದ 7:30ರ ತನಕ ಪೆÇನ್ನಂಪೇಟೆ ನಿಸರ್ಗ ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, 7:30 ರಿಂದ 8:30ರ ತನಕ ದಿಕ್ಷೀತ್ ತಂಡದಿಂದ ಸಿ.ಡಿ ನೈಟ್ಸ್, ಗಿಟಾರ್ ವಾದನ ಮತ್ತು ಗಾಯನ, 9:30ರಿಂದ ಸೈಕ್ಲೋನ್ ತಂಡದಿಂದ ವೈವಿಧ್ಯಮಯ ನೃತ್ಯ.

ಅ. 8ರಂದು ದಶಮಂಟಪಗಳ ಶೋಭಯಾತ್ರೆಯೊಂದಿಗೆ ಶ್ರೀ. ಕಲಾವೇದಿಕೆಯಲ್ಲಿ ಸರಿಗಮಪ, ಕನ್ನಡ ಕೋಗಿಲೆ ರಿಯಾಲಿಟಿ ಶೋ ಖ್ಯಾತಿಯ ಪುರುಷೋತ್ತಮ್ ತಂಡದವರಿಂದ ಸಂಗೀತ ರಸಮಂಜರಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಕಾರ್ಯಾಧಕ್ಷ ಕೆ.ಪಿ. ಬೋಪಣ್ಣ, ಉಪಾಧ್ಯಕ್ಷ ಚೇತನ್, ಪ್ರಧಾನ ಕಾರ್ಯದರ್ಶಿ ಜಿಮ್ಮ ಸುಬ್ಬಯ್ಯ, ಕಾವೇರಿ ದಸರಾ ಸಮಿತಿ ಪದಾಧಿಕಾರಿಗಳಾದ ಗಣೇಶ್ ರೈ, ಗಾಂಧಿ, ರಮೇಶ್, ಶೀಲಾ ಬೋಪಣ್ಣ, ದಶಮಂಟಪಗಳ ಸಮಿತಿ ಅಧ್ಯಕ್ಷ ಜಮ್ಮಡ ಅರಸು ಉಪಸ್ಥಿತರಿದ್ದರು.