ಸುಂಟಿಕೊಪ್ಪ, ಸೆ. 24: ಪ್ರೌಢಶಾಲಾ ವಿಭಾಗದ ಜಿಲ್ಲಾಮಟ್ಟದ ಫುಟ್‍ಬಾಲ್ ಪಂದ್ಯಾವಳಿಯಲ್ಲಿ ಸುಂಟಿಕೊಪ್ಪ ಪ್ರೌಢಶಾಲೆಯ 5 ಮಂದಿ ವಿದ್ಯಾರ್ಥಿಗಳು ವಿಭಾಗಿಯ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.
ವೀರಾಜಪೇಟೆಯ ಸಂತ ಅನ್ನಮ್ಮ ಪ್ರೌಢಶಾಲಾ ಮೈದಾನದಲ್ಲಿ ನಡೆದ ಜಿಲ್ಲಾಮಟ್ಟದ ಫುಟ್ಬಾಲ್ ಕ್ರೀಡಾಕೂಟದಲ್ಲಿ ಸುಂಟಿಕೊಪ್ಪ ಪ್ರೌಢಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದು, ಈ ತಂಡದ 5 ಮಂದಿ ಕ್ರೀಡಾಪಟುಗಳಾದ ಮಸೂದ್, ಮಹೇಂದ್ರ, ಗಣೇಶ್, ರೇನೀಸ್ ಹಾಗೂ ಶಶಿಕುಮಾರ್ ಅವರುಗಳು ವಿಭಾಗೀಯ ಮಟ್ಟಕ್ಕೆ ನೇಮಕಗೊಂಡಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕರಾದ ಬಾಲಕೃಷ್ಣ, ಕೊಡಗು ಜಿಲ್ಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್, ಸಹಶಿಕ್ಷಕಿಯರು ಮಕ್ಕಳ ಸಾಧನೆಯನ್ನು ಅಭಿನಂದಿಸಿದರು.