ಮಡಿಕೇರಿ, ಸೆ. 24: ಸಂಘದ 2018-19ನೇ ಸಾಲಿನ 18ನೇ ವಾರ್ಷಿಕ ಮಹಾಸಭೆಯನ್ನು ಮಂಗಳವಾರ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಕೆ.ಎಂ. ಗಣೇಶ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಅವರು ಮಾತನಾಡಿ, ಸಂಘವು ದಿನಾಂಕ 22.12.2002ರಂದು ಪ್ರಾರಂಭಗೊಂಡು ಸುಮಾರು 17 ವರ್ಷದಿಂದ ತನ್ನ ಸ್ವಂತ ಬಂಡವಾಳದಿಂದ ವ್ಯವಹಾರ ನಡೆಸುತ್ತಾ ಬಂದಿದೆ. ತಾ. 31.3.2019ಕ್ಕೆ ಸಂಘದಲ್ಲಿ ಒಟ್ಟು 1875 ಜನ ಸದಸ್ಯರಿರುತ್ತಾರೆ. ಒಟ್ಟು ರೂ. 66,88,000 ಪಾಲು ಬಂಡವಾಳ ಸಂಗ್ರಹವಾಗಿರುತ್ತದೆ. ಸಂಘದಲ್ಲಿ ಅಡಮಾನ ಸಾಲ, ಜಾಮೀನು ಸಾಲ, ಆಭರಣ ಸಾಲ, ಪಿಗ್ಮಿ ಓವರ್ ಡ್ರಾಫ್ಟ್ ಸಾಲ ಮತ್ತು ಸಿಬ್ಬಂದಿಗಳಿಗೆ ಆಸಾಮಿ ಸಾಲ ನೀಡಲಾಗುತ್ತಿದೆ. ಮಾರ್ಚ್ ಅಂತ್ಯಕ್ಕೆ ರೂ. 26,87,70,524 ಠೇವಣಾತಿ ಸಂಗ್ರಹಿಸಲಾಗಿದೆ. ರೂ. 7,95,22,550 ವಿವಿಧ ಸಾಲ ನೀಡಲಾಗಿದೆ ಎಂದರು.
ಅಲ್ಲದೆ ಸಂಘವು 2006-07ನೇ ಸಾಲಿನಿಂದ ಲಾಭದಲ್ಲಿ ನಡೆಯುತ್ತಿದೆ. ಪ್ರಸಕ್ತ 20,28,986 ಲಾಭ ಗಳಿಸಿದ್ದು, ಶೇ. 9 ರಷ್ಟು ಡಿವಿಡೆಂಡ್ ಘೋಷಿಸಲಾಗಿದೆ ಎಂದರು. ಮಡಿಕೇರಿಯಲ್ಲಿ ಸಂಘವು ಇದೀಗ ತನ್ನ ಸ್ವಂತ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುತ್ತಿದೆ ಎಂದರು.
ಸಿದ್ದಾಪುರ ಶಾಖೆಗಳ ವ್ಯವಹಾರವು ಚೆನ್ನಾಗಿ ನಡೆಯುತ್ತಿದೆ ಎಂದು ಮಾಹಿತಿಯಿತ್ತರು. ಸಂಘದಲ್ಲಿ ಒಟ್ಟು 24 ಜನ ಪಿಗ್ಮಿ ಸಂಗ್ರಹಗಾರರು ಜಿಲ್ಲೆಯ ಹಲವು ಕಡೆಗಳಲ್ಲಿ ದಿನನಿತ್ಯ ಪಿಗ್ಮಿ ಠೇವಣಿ ಸಂಗ್ರಹಿಸುತ್ತಿದ್ದಾರೆ. ಸಂಘದಲ್ಲಿ ನಿರಖು ಠೇವಣಿಗಳಿಗೆ ಇತರ ಎಲ್ಲಾ ಬ್ಯಾಂಕ್‍ಗಳಿಗಿಂತಲೂ ಹೆಚ್ಚಿಗೆ ಬಡ್ಡಿ ದರವನ್ನು ನೀಡಲಾಗುತ್ತಿದೆ ಎಂದು ಗಣೇಶ್ ವಿವರಿಸಿದರು.
ಬಿ. ರಾಮಕೃಷ್ಣಯ್ಯ, ನಿರ್ದೇಶಕರುಗಳಾದ ಕೆ.ಬಿ. ಗಿರೀಶ್ ಗಣಪತಿ, ಎಸ್.ಐ. ಮುನೀರ್ ಅಹ್ಮದ್, ಎಂ.ಇ. ಅಬ್ದುಲ್ ರಹೀಂ, ಎಂ.ಪಿ. ಕಾವೇರಪ್ಪ, ಎಂ. ಬಿಜಾಯ್, ಅನಿಲ್ ಹೆಚ್.ಕೆ. ಮ್ಯಾಥ್ಯೂ ಕೆ.ಇ., ಎ.ಪಿ. ವೀರರಾಜು, ಬಿ. ಜನಾರ್ಧನ ಪ್ರಭು, ಬಿ. ಅಮೃತ್ ರಾಜ್, ಜಯಂತಿ ಎಸ್.ಎಂ. ಹಾಗೂ ಕಾರ್ಯದರ್ಶಿ ಶ್ಯಾಮಲ ಟಿ.ಡಿ. ಉಪಸ್ಥಿತರಿದ್ದರು.