ಮಡಿಕೇರಿ, ಸೆ. 24: ಮಡಿಕೇರಿ ನಗರ ದಸರಾ ಅಲಂಕಾರ ಸಮಿತಿ ವತಿಯಿಂದ ದಸರಾ ಅಂಗವಾಗಿ ವಿವಿಧ ಅಲಂಕಾರ ಸ್ಪರ್ಧೆಗಳನ್ನು ಆಯೋಜಿಸ ಲಾಗಿದೆ ಎಂದು ಸಮಿತಿ ಅಧ್ಯಕ್ಷ ಸಿ.ಕೆ. ನಂದೀಶ್ ಕುಮಾರ್ ತಿಳಿಸಿದ್ದಾರೆ.

ತಾ. 29 ರಂದು ಕರಗ ಪೂಜೆ ಸಂದರ್ಭ ರಂಗೋಲಿ ಸ್ಪರ್ಧೆ ಆಯೋಜಿತವಾಗಿದ್ದು, ಚುಕ್ಕಿ, ಪುಡಿ ಮತ್ತು ಪುಷ್ಪ ರಂಗೋಲಿ ವಿಭಾಗಗಳಲ್ಲಿ ಸ್ಪರ್ಧೆಗಳು ಜರುಗಲಿದೆ. ರಂಗೋಲಿ ಸ್ಪರ್ಧೆಗೆ ಹೆಸರು ನೋಂದಾಯಿಸಲು ತಾ. 28 ಕೊನೇ ದಿನಾಂಕವಾಗಿದೆ.

ಅ. 7 ರಂದು ಆಯುಧ ಪೂಜೆ ಅಂಗವಾಗಿ ಗಾಂಧಿ ಮೈದಾನದಲ್ಲಿ ವಾಹನ ಅಲಂಕಾರ ಸ್ಪರ್ಧೆ ಆಯೋಜಿತವಾಗಿದೆ. ಲಾರಿ, ಬಸ್, ಕಾರ್, ಸೈಕಲ್, ಬೈಕ್, ಬಸ್, ಆಟೋ, ಟಾಟಾ ಏಸ್, ಜೀಪ್, ಪಿಕ್‍ಅಪ್, ಜೆಸಿಬಿಗಳಿಗೆ ಅಲಂಕಾರ ಸ್ಪರ್ಧೆ ಜರುಗಲಿದೆ. ಈ ಎಲ್ಲಾ ಸ್ಪರ್ಧೆಗಳು ಅಂದು ಸಂಜೆ 7 ಗಂಟೆಯಿಂದ ರಾತ್ರಿ 8.30 ಗಂಟೆಯವರೆಗೆ ಗಾಂಧಿ ಮೈದಾನದಲ್ಲಿ ಜರುಗಲಿದೆ.

ಅ. 8 ರಂದು ದಸರಾ ಅಂಗವಾಗಿ ಮಡಿಕೇರಿ ನಗರಾಲಂಕಾರ ಸ್ಪರ್ಧೆಯ ಅಂಗವಾಗಿ ನಗರದ ವಿವಿಧ ಕಟ್ಟಡಗಳ ಅಲಂಕಾರ ಸ್ಪರ್ಧೆ ಜರುಗಲಿದೆ.

ರಾತ್ರಿ 7 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಸ್ಪರ್ಧೆಗಳು ಆಯೋಜಿತವಾಗಿದೆ. ದಸರಾದ ದಶ ದೇವಾಲಯಗಳು, ಸರ್ಕಾರಿ, ಅರೆಸರ್ಕಾರಿ ಕಚೇರಿಗಳು, ವಿವಿಧ ಕಟ್ಟಡಗಳು, ಚಿನ್ನದಂಗಡಿ, ಬಟ್ಟೆಯಂಗಡಿ, ಬೇಕರಿ, ಹೊಟೇಲ್, ಬ್ಯಾಂಕ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕಟ್ಟಡ ಅಲಂಕಾರ ಸ್ಪರ್ಧೆ ಆಯೋಜಿಸಲ್ಪಟ್ಟಿದೆ.

ಈ ಎಲ್ಲಾ ಸ್ಪರ್ಧೆಗಳಿಗೆ ಹೆಸರು ನೋಂದಾಯಿಸಲು ಅ.7 ಕೊನೇ ದಿನಾಂಕವಾಗಿದ್ದು, ಹೆಸರುಗಳನ್ನು ನಂದೀಶ್ ಕುಮಾರ್ (9480325167), ಹರೀಶ್ (9448585470) ಇವರಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ದಸರಾ ಅಲಂಕಾರ ಸಮಿತಿ ಪ್ರಕಟಣೆ ತಿಳಿಸಿದೆ.