ನಾಪೆÇೀಕ್ಲು, ಸೆ. 24: ರಾಜ್ಯ ಸರಕಾರದ ಆದೇಶದ ಆನ್ವಯ ಕೊಡಗು ಜಿಲ್ಲಾ ಪೋಲಿಸ್ ಮತ್ತು ನಾಪೆÇೀಕ್ಲು ಪೋಲಿಸ್ ಠಾಣೆ, ಮಡಿಕೇರಿ ಉಪವಿಭಾಗ, ಇವರ ಸೂಚನೆಯಂತೆ ಸಂಚಾರಿ ನಿಯಮ ಪಾಲಿಸಬೇಕಾದ ಅಂಶಗಳು ಮತ್ತು ನಿಯಮ ಉಲ್ಲಂಘನೆಗೆ ದಂಡನೆಯ ನಾಮಫಲಕವನ್ನು ನಾಪೆÇೀಕ್ಲು ಪೊಲೀಸ್ ಠಾಣೆಯ ಪ್ರಭಾರ ಠಾಣಾಧಿಕಾರಿ ದೇವರಾಜ್ ಅನಾವರಣ ಗೊಳಿಸಿದರು.

ನಂತರ ಮಾತನಾಡಿದ ಅವರು ಸರಕಾರದ ಆದೇಶದಂತೆ ಪ್ರತಿಯೊಬ್ಬ ವಾಹನ ಮಾಲೀಕರು ಮತ್ತು ಚಾಲಕರು ಕಡ್ಡಾಯವಾಗಿ ಡ್ರೈವಿಂಗ್ ಲೈಸನ್ಸ್ ಹೊಂದಿರಬೇಕು, ಬೈಕ್ ಸವಾರರು ಹೆಲ್‍ಮೇಟ್ ಹಾಕದೆ ಬೈಕ್ ಚಲಾಯಿಸಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವದು ಎಂದು ಎಚ್ಚರಿಸಿದರು.

ನಗರ ಆಟೋ ಚಾಲಕರು ವಾಹನ ಪರವಾನಗಿಯನ್ನು ಹೊಂದಿರ ಬೇಕೆಂದ ಅವರು ದಾಖಾಲಾತಿ ಇಲ್ಲದ ವಾಹನ ಚಾಲನೆ ಅಪರಾಧವಾಗಿದ್ದು ಸ್ಥಳದಲ್ಲಿಯೇ ದಂಡ ವಿಧಿಸಲಾ ಗುವದು. ನಗರದಲ್ಲಿ ಆಟೋ ರಿಕ್ಷಾಗಳು ನಿಲ್ದಾಣದಲ್ಲಿ ನಿಲ್ಲದೆ ನಗರದಲ್ಲಿ ಸುತ್ತುತ್ತಿರುವದು ಗಮನಕ್ಕೆ ಬಂದಿದ್ದು ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದರು.

ಅಲ್ಲದೆ ಆಟೋ ರಿಕ್ಷಾಕ್ಕೆ ಎನ್.ಪಿ.ಕೆ. ನಂಬರನ್ನು ಪ್ರತಿಯೊಬ್ಬರು ಸಂಘದ ಮುಖಾಂತರ ಅಳವಡಿಸಬೇಕೆಂದ ಅವರು ಎನ್.ಪಿ.ಕೆ. ನಂಬರ್ ಇಲ್ಲದ ಆಟೋ ರಿಕ್ಷಾದ ಮೇಲೆ ಕ್ರಮ ಕೈಗೊಳ್ಳಲಾಗುವದು ಎಂದು ಎಚ್ಚರಿಸಿದರು. ಈ ನಾಮಫಲಕವನ್ನು ನಾಪೆÇೀಕ್ಲು ವಾಹನ ಚಾಲಕ ಮತ್ತು ಮಾಲೀಕರ ಸಂಘದವರು ಉದಾರವಾಗಿ ನೀಡಿದ್ದು ಅವರಿಗೆ ಧನ್ಯವಾದ ಹೇಳಿದರು.

ಕಾರ್ಯಕ್ರಮದಲ್ಲಿ ಆಟೋ ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎಂ.ಇ. ಅಬ್ದುಲ್ ರಜಾಕ್ (ಗುಂಡು), ಗ್ರಾಮ ಪಂಚಾಯತ್ ಸದಸ್ಯ ಟಿ.ಎ. ಮಹಮ್ಮದ್, ಪೋಲಿಸ್ ಹೆಡ್ ಕಾನ್ಸ್‍ಟೇಬಲ್ ಪ್ರಾನ್ಸಿಸ್, ನವೀನ್, ರಾಜೇಶ್, ಬಸೀರ್, ಪವಿ, ಪ್ರಸಾದ್ ಸಂಘದ ಕಾರ್ಯದರ್ಶಿ ಜಕ್ರೀಯ ಇದ್ದರು. -ದುಗ್ಗಳ