ಸೋಮವಾರಪೇಟೆ,ಸೆ.24: ಇಲ್ಲಿನ ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘವು ಸದಸ್ಯರುಗಳಿಗೆ ರೂ. 1 ಕೋಟಿ 62 ಲಕ್ಷ ಸಾಲ ವಿತರಿಸಿದ್ದು, ರೂ. 7,66,616 ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹೇಳಿದರು.

ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ 2018-19ನೇ ಸಾಲಿನ 23ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ ನೀಡಿರುವ ಸಾಲದಲ್ಲಿ ಶೇ. 88ರಷ್ಟು ವಸೂಲಿಯಾಗಿದೆ. ಸಂಘಕ್ಕೆ ಸ್ವಂತ ಕಟ್ಟಡ ಹೊಂದುವ ದೃಷ್ಟಿಯಿಂದ ಈಗಾಗಲೇ ಮಹದೇಶ್ವರ ಬ್ಲಾಕ್‍ನಲ್ಲಿ ರೂ. 7.33ಲಕ್ಷದಲ್ಲಿ ನೂತನ ಜಾಗ ಖರೀದಿಸಲಾಗಿದೆ ಎಂದರು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಜಲಜಾ ಶೇಖರ್, ನಿರ್ದೇಶಕರಾದ ಉಷಾ ತೇಜಸ್ವಿ, ಜಯಂತಿ ಶಿವಕುಮಾರ್, ವಸಂತ ರಮೇಶ್, ಬೇಬಿ ಚಂದ್ರಹಾಸ್, ಶೋಭಾ ಶಿವರಾಜು, ಸಂಧ್ಯಾರಾಣಿ ಕೃಷ್ಣಪ್ಪ, ಉಮಾ ರುದ್ರಪ್ರಸಾದ್, ರೂಪಶ್ರೀ ರವಿಶಂಕರ್, ನಳಿನಿ ಗಣೇಶ್, ಕಾರ್ಯದರ್ಶಿ ಪೃಥ್ವಿ ಚಂದ್ರಶೇಖರ್ ಉಪಸ್ಥಿತರಿದ್ದರು.

ಇದೇ ಸಂದರ್ಭ ಸಕಾಲದಲ್ಲಿ ಸಾಲ ಮರುಪಾವತಿಸಿದ ಇಬ್ಬರು ಸದಸ್ಯರನ್ನು ಸನ್ಮಾನಿಸಲಾಯಿತು. ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು.