ಪೊನ್ನಂಪೇಟೆ, ಸೆ. 24: ಕಳೆದ ತಿಂಗಳು ಕೊಡಗಿನಲ್ಲಿ ಸುರಿದ ಮಹಾ ಮಳೆಯ ಸಂದರ್ಭ ನಿರಾಶ್ರಿತರ ಶಿಬಿರಗಳಲ್ಲಿ ಸೇವೆ ಸಲ್ಲಿಸಿದ ಗೋಣಿಕೊಪ್ಪ ಕಾವೇರಿ ಕಾಲೇಜಿನ ಎನ್.ಎಸ್.ಎಸ್. ಹಾಗೂ ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ಸ್ ಘಟಕದ ಸ್ವಯಂ ಸೇವಕರಿಗೆ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ವತಿಯಿಂದ ಬಟ್ಟೆ, ಸ್ವೆಟರ್ ಹಾಗೂ ಪುಸ್ತಕಗಳನ್ನು ಆಶ್ರಮದ ಅಧ್ಯಕ್ಷ ಬೋಧ ಸ್ವರೂಪಾನಂದ ಸ್ವಾಮೀಜಿ ವಿತರಿಸಿ ಸ್ವಯಂ ಸೇವಕರಿಗೆ ಪ್ರೋತ್ಸಾಹ ನೀಡಿದರು.

ಈ ಸಂದರ್ಭ ಪಂಚವಕ್ತ್ರಾನಂದ ಸ್ವಾಮೀಜಿ ಹಾಗೂ ಕಾವೇರಿ ಕಾಲೇಜಿನ ಎನ್‍ಎಸ್‍ಎಸ್ ಅಧಿಕಾರಿ ಎಂ.ಎನ್. ವನಿತ್ ಕುಮಾರ್ ಇದ್ದರು.