ಸಿದ್ದಾಪುರ, ಸೆ. 22: ವಿವನ್ ಬ್ಯಾಡ್ಮಿಂಟನ್ ಕೋರ್ಟ್ ಸಿದ್ದಾಪುರ ವತಿಯಿಂದ ತಾ. 29 ರಂದು ಸಿದ್ದಾಪುರದಲ್ಲಿ ಜಿಲ್ಲಾಮಟ್ಟದ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯಲಾಗುವದೆಂದು ಸಂಸ್ಥೆಯ ವ್ಯವಸ್ಥಾಪಕ ದಿಜಿತ್ ತಿಳಿಸಿದ್ದಾರೆ.

ಸಿದ್ದಾಪುರ ಮಡಿಕೇರಿ ರಸ್ತೆಯಲ್ಲಿರುವ ಸಂಸ್ಥೆಯ ಒಳಾಂಗಣ ಕ್ರೀಡಾಂಗಣದಲ್ಲಿ ಬೆಳಿಗ್ಗೆ 9 ಗಂಟೆಗೆ ಪಂದ್ಯಾಟ ಪ್ರಾರಂಭವಾಗಲಿದ್ದು, ವಿಜೇತ ತಂಡಗಳಿಗೆ ಬಹುಮಾನವಾಗಿ ನಗದು ಮತ್ತು ಟ್ರೋಫಿ ನೀಡಲಾಗುವದು. ಭಾಗವಹಿಸಲು ಇಚ್ಚಿಸುವ ಆಟಗಾರರು ಹೆಸರು ನೋಂದಾಯಿಸಲು ತಾ. 25 ರವರೆಗೆ ಅವಕಾಶವಿದ್ದು, 9945534161, 7019155415 ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದು. ಸಂಸ್ಥೆಯ ವತಿಯಿಂದ ಪ್ರತಿ ತಿಂಗಳ ಕೊನೆಯ ಶನಿವಾರ ಗ್ರಾಮಮಟ್ಟದ ಮತ್ತು ಭಾನುವಾರ ಜಿಲ್ಲಾಮಟ್ಟದ ಪಂದ್ಯಾಟಗಳು ನಡೆಯಲಿದೆ ಎಂದು ತಿಳಿಸಿದ್ದಾರೆ.