ಮಡಿಕೇರಿ, ಸೆ. 21: ವೀರಾಜಪೇಟೆ ವಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಟ್ಟಂಗಾಲ ಒಕ್ಕೂಟದ ಅಧ್ಯಕ್ಷರಾಗಿ ರೇಖಾ ಗಣೇಶ್ ಅವರು ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಪಿ.ಸಿ. ರಂಜನ್, ಕಾರ್ಯದರ್ಶಿಯಾಗಿ ಗೀತಾ, ಸಹ ಕಾರ್ಯದರ್ಶಿಯಾಗಿ ಕೆ.ಬಿ. ಜ್ಯೋತಿ, ಖಜಾಂಚಿಯಾಗಿ ಜೈನಾಬಿ ಆಯ್ಕೆಗೊಂಡಿದ್ದಾರೆ. ಬಿಟ್ಟಂಗಾಲ-ಬಾಳುಗೋಡು ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.