ಮಡಿಕೇರಿ, ಸೆ.21: 2018-19ನೇ ಸಾಲಿನಲ್ಲಿ ಬಿದ್ದ ಭಾರೀ ಮಳೆಯಿಂದಾಗಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಮನೆಗಳು ಕುಸಿದು ಬಿದ್ದಿದ್ದು, ಮನೆಗಳು ಅಪಾಯದಲ್ಲಿದ್ದರಿಂದ ಬಾಡಿಗೆ ಮನೆಯಲ್ಲಿದ್ದ ಜನರಿಗೆ ಪ್ರತಿ ಕುಟುಂಬಕ್ಕೆ 30 ಸಾವಿರ ರೂ. ಚೆಕ್ಕನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ವಿತರಿಸಿದರು. ಮಾಸಿಕ 10 ಸಾವಿರ ರೂ.ನಂತೆ 3 ತಿಂಗಳ ಬಾಡಿಗೆ ಒಟ್ಟು 30 ಸಾವಿರ ರೂ. ಚೆಕ್ಕನ್ನು 267 ಕುಟುಂಬಗಳಿಗೆ ವಿತರಿಸಲಾಯಿತು.
ಒಂದು ತಿಂಗಳಿಗೆ ತಲಾ 10 ಸಾವಿರ ರೂ.ನಂತೆ 30 ಸಾವಿರ ರೂ.ಗಳ ಚೆಕ್ಕನ್ನು 267 ಕುಟುಂಬಕ್ಕೆ ವಿತರಿಸಲಾಯಿತು. ಈ ಸಂದರ್ಭ ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಇತರರು ಇದ್ದರು.