ಮಡಿಕೇರಿ, ಸೆ. 21: ಕಲೆ ಸಂಸ್ಕøತಿ ಸಾಹಿತ್ಯದ ಸದಬಿರುಚಿಯನ್ನು ಯುವ ಸಮೂಹ ಬೆಳಸಿಕೊಳ್ಳುವದರೊಂದಿಗೆ ಆದರ್ಶ ಜೀವನ ಕಾಯ್ದುಕೊಳ್ಳ ಬೇಕೆಂದು ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎನ್.ವಿ.ದೇವಿಪ್ರಸಾದ್ ಕರೆ ನೀಡಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಸಂಪಾಜೆ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಯುವ ಸೌರಭ ಸಾಂಸ್ಕøತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೀವನ್ ಚಿದ್ಕಾರ್ ಅವರು ಕಲೆ ಮತ್ತು ಸಂಸ್ಕøತಿ ನಮ್ಮ ದೇಶದ ಶ್ರೀಮಂತ ಆಸ್ತಿ ಎಂದರು.

ಸಂಪಾಜೆ ಎಜ್ಯುಕೇಶನ್ ಸೊಸೈಟಿ ಶಂಕರನಾರಾಯಣ ಭಟ್, ಸುಬ್ರಹ್ಮಣ್ಯ ಉಪಾಧ್ಯಾಯ ಮಾತನಾಡಿದರು.

ಪ್ರಾಸ್ತಾವಿಕವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ.ದರ್ಶನ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಹರಿಕಥೆ, ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ಗಾಯನ, ಸಮೂಹ ನೃತ್ಯ, ಡೊಳ್ಳುಕುಣಿತ, ಕಂಸಾಳೆ, ಸುಗಮ ಸಂಗೀತ, ಜನಪದ ಗೀತಾಗಾಯನ, ನೃತ್ಯ ವೈಭವ, ಜಾನಪದ ನೃತ್ಯ, ವಚನ ಗಾಯನ ನಡೆದವು.

ವೇದಿಕೆಯಲ್ಲಿ ಬಿ.ಆರ್.ಪದ್ಮಯ್ಯ, ಮುಖ್ಯ ಶಿಕ್ಷಕ ಎ ಐತಪ್ಪ, ಇಲಾಖೆಯ ಗಿಡ್ಡಪ್ಪ ಇತರರು ಹಾಜರಿದ್ದರು. ಷಡಾಕ್ಷರಯ್ಯ ಅವರ ನಾಡಗೀತೆ ಯೊಂದಿಗೆ ಪ್ರಾರಂಭಿಸಲಾಯಿತು. ಶಿಕ್ಷಕ ಎಚ್.ಜಿ. ಕುಮಾರ್ ನಿರೂಪಿಸಿ, ಇಲಾಖೆಯ ಮಣಜೂರು ಮಂಜುನಾಥ್ ವಂದಿಸಿದರು.