ಮಡಿಕೇರಿ, ಸೆ.21: ಮಡಿಕೇರಿ ನಗರ ದಸರಾ ಸಮಿತಿ ಹಾಗೂ ದಸರಾ ಕ್ರೀಡಾ ಸಮಿತಿ ವತಿಯಿಂದ ಇಂದು ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ನಗರದ ಜ. ತಿಮ್ಮಯ್ಯ ವೃತ್ತದಿಂದ ವಿವಿಧ ಪ್ರಾಕಾರಗಳ ಮ್ಯಾರಥಾನ್ಗೆ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಗ್ರಾಮಾಂತರ ಠಾಣೆಯ ಉಪ ಪೊಲೀಸ್ ನಿರೀಕ್ಷಕ ಚೇತನ್, ಶಕ್ತಿ ಸಂಪಾದಕ ಜಿ. ಚಿದ್ವಿಲಾಸ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಕೆ. ಬಾಲಕೃಷ್ಣ ಹಾಗೂ ಇತರರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. 10 ಕಿ.ಮೀ. ಮ್ಯಾರಥಾನ್ ಸೇರಿದಂತೆ ಇತರ ಸ್ಪರ್ಧೆಗಳಿಗೆ ನೂರಾರು ಮಂದಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡು ಮೆರುಗು ನೀಡಿದರು.ಕ್ರೀಡಾ ಸಮಿತಿಯ ಅಧ್ಯಕ್ಷ ಬಿ.ಎಂ. ಹರೀಶ್, ಕಾರ್ಯದರ್ಶಿ ಕಪಿಲ್ ಕುಮಾರ್, ದಸರಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ಪದಾಧಿಕಾರಿಗಳಾದ ಪಿ.ಟಿ. ಉಣ್ಣಿಕೃಷ್ಣ, ಮನು ಮಂಜುನಾಥ್, ಪ್ರಜು ರೈ, ಪ್ರದೀಪ್ ಕರ್ಕೆರಾ, ರಾಜೇಶ್ ವಿ.ಸಿ., ನಯನ, ಅಪ್ಪು ಹಾಗೂ ಇತರರು ಉಪಸ್ಥಿತರಿದ್ದರು.