ವೀರಾಜಪೇಟೆ, ಸೆ. 20: ಕಳೆದ ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ದಕ್ಷಿಣ ಕೊಡಗಿನಲ್ಲಿ ಸುರಿದ ಭಾರೀ ಮಳೆಗೆ ಲೋಕೋಪಯೋಗಿ ಇಲಾಖೆಗೆ ರಸ್ತೆ, ಸೇತುವೆಗಳ ಹಾನಿಯಿಂದ ಒಟ್ಟು ರೂ.72 ಕೋಟಿ ನಷ್ಟ ಸಂಭವಿಸಿರುವದಾಗಿ ಅಂದಾಜು ಮಾಡಲಾಗಿದ್ದು, ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ.ಭಾರೀ ಮಳೆಯ ಪರಿಣಾಮ ಬೇತ್ರಿ ಗ್ರಾಮದ ತಂಡಾಗುಂಡಿ ಸೇತುವೆ, ಮಾಕುಟ್ಟ ಅಂಬು ಹೊಟೇಲ್ ಬಳಿಯಿರುವ ಸೇತುವೆ ಸೇರಿದಂತೆ ಒಟ್ಟು 9 ಸೇತುವೆಗಳು ಹಾನಿಗೊಳ ಗಾಗಿದ್ದು, ಎಲ್ಲಾ ಸೇತುವೆಗಳನ್ನು ತಳಮಟ್ಟದಿಂದಲೇ ದುರಸ್ತಿಪಡಿಸ ಬೇಕಾಗಿದೆ. ಕರ್ನಾಟಕ-ಕೇರಳ ಅಂತಾ ರಾಜ್ಯವನ್ನು ಸಂಪರ್ಕಿ ಸುವ ಮಾಕುಟ್ಟ ಸೇತುವೆಯನ್ನು ತಾತ್ಕಾಲಿಕವಾಗಿ ಮಾತ್ರ ದುರಸ್ತಿಪಡಿಸ ಲಾಗಿದೆ. ತಾಂತ್ರಿಕ ತಜ್ಞರ ಸಲಹೆ, ಅಭಿಪ್ರಾಯದ ಮೇರೆಗೆ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ.
ದಕ್ಷಿಣ ಕೊಡಗಿನಾದ್ಯಂತ ಎಲ್ಲಾ ರಸ್ತೆಗಳು ಹಾನಿಗೊಳಗಾಗಿದ್ದು ಮುಖ್ಯವಾಗಿ ಕಾನೂರು ಕುಟ್ಟ ರಸ್ತೆ, ಪೊನ್ನಂಪೇಟೆ, ಹುದಿಕೇರಿ, ಶ್ರೀಮಂಗಲ, ಕುಟ್ಟ ರಸ್ತೆ, ಗೋಣಿಕೊಪ್ಪ ತಿತಿಮತಿ ರಸ್ತೆ, ವೀರಾಜಪೇಟೆ, ಗೋಣಿಕೊಪ್ಪ ರಸ್ತೆ, ವೀರಾಜಪೇಟೆ ಬೇತ್ರಿ ಸಂಪರ್ಕ ರಸ್ತೆ ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯೂ ಇತರ ಎಲ್ಲ ರಸ್ತೆಗಳು ಹಾನಿ ಗೊಳಗಾಗಿವೆ. ರಸ್ತೆ ಹಾಗೂ ಸೇತುವೆ ದುರಸ್ತಿಗೆ ರೂ. 72 ಕೋಟಿ ವೆಚ್ಚ ತಗಲಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.