*ಗೋಣಿಕೊಪ್ಪಲು, ಸೆ. 20: ಪೆÇನ್ನಂಪೇಟೆ ನಾಡು ವ್ಯವಸಾ ಯೋತ್ಪನ್ನ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘ 2018-19ರ ಸಾಲಿನ ವಾರ್ಷಿಕ ವಹಿವಾಟಿನಲ್ಲಿ 35.44 ಲಕ್ಷ ನಿವ್ವಳ ಲಾಭ ಹೊಂದಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಮುದ್ದಿಯಡ ಡಿ. ಮಂಜು ಗಣಪತಿ ತಿಳಿಸಿದ್ದಾರೆ.
ಸಂಘದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಸಂಘದ 2594 ಸದಸ್ಯರುಗಳ ವಾರ್ಷಿಕ ವಹಿವಾಟಿನಿಂದ ಸಂಘವು ಲಾಭ ಹೊಂದಿ ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಗಿದೆ ಎಂದು ಹೇಳಿದರು.
1930ರಲ್ಲಿ ಪೆÇನ್ನಂಪೇಟೆ ನಾಡು ಕ್ರಾಪ್ ಲೋನ್, ಸೇಲ್ ಮತ್ತು ಸಪ್ಲೈ ಎಂಬ ನಾಮಕರಣದಿಂದ ಪ್ರಾರಂಭವಾದ ಸಂಘವು ತನ್ನ ಕಾರ್ಯಕ್ಷೇತ್ರವನ್ನು ಪೆÇನ್ನಂಪೇಟೆ ನಾಡಿನ 15 ಗ್ರಾಮಗಳು ಮತ್ತು ಶ್ರೀಮಂಗಲ ನಾಡಿನ 6 ಗ್ರಾಮಗಳು ಒಳಗೊಂಡಂತೆ 21 ಗ್ರಾಮಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ರೈತ ಸದಸ್ಯರ ಅನುಕೂಲಕ್ಕಾಗಿ ಸಂಘವು ಉತ್ತಮ ಮಟ್ಟದ ವ್ಯವಸಾಯೋಪಕರಣ, ಗೊಬ್ಬರ, ಕ್ರಿಮಿನಾಶಕ, ಸಿಮೆಂಟ್, ಹತ್ಯಾರು, ಬಟ್ಟೆ, ಮುಳ್ಳು ತಂತಿ, ಆರ್.ಸಿ.ಸಿ. ಮೋರಿ, ಪೈಪ್, ಸೇರಿದಂತೆ ಅಕ್ಕಿಗಿರಣಿ, ಇಂಡಿಯನ್ ಆಯಿಲ್ ಕಾಪೆರ್Çೀರೇಷನ್ ಸೇರಿದಂತೆ ರೈತರಿಗಾಗಿ ಭತ್ತ, ಕಾಫಿ, ಕಾಳುಮೆಣಸು, ದಾಸ್ತಾನು ಮಾಡಲು ಗೋದಾಮು ಸೌಲಭ್ಯವನ್ನು ಹೊಂದಿದೆ. ರೈತ ಸದಸ್ಯರ ಕಾಫಿಗೆ ಉತ್ತಮ ಮಾರುಕಟ್ಟೆ ದೊರಕಿಸುವ ಉದ್ದೇಶದಿಂದ ಘಟಕವು ಕಾಫಿ ಗಿರಣಿ ಘಟಕವನ್ನು ಸಹ ಪ್ರಾರಂಭಿಸಿದೆ. ಇದರೊಂದಿಗೆ ಸಂಘವು 1.80 ಎಕರೆ ಕಾಫಿ ತೋಟವನ್ನು ಹೊಂದಿದೆ ಎಂದು ಮಾಹಿತಿ ನೀಡಿದರು.
ಈ ಎಲ್ಲಾ ಉತ್ತಮ ವ್ಯವಹಾರ ಆಡಳಿತದಲ್ಲಿನ ಪಾರದರ್ಶಕತೆ, ವ್ಯಾಪಾರ ವಹಿವಾಟುಗಳ ಮುಂಚೂಣಿಯನ್ನು ಕಂಡು ಡಿ.ಸಿ.ಸಿ ಬ್ಯಾಂಕ್ ವತಿಯಿಂದ ಪುರಸ್ಕರಿಸಿ ಉತ್ತಮ ಸಂಘ ಎಂದು ಜಿಲ್ಲೆಗೆ ಎರಡನೇ ಸ್ಥಾನವನ್ನು ನೀಡಿ ಅಭಿನಂದಿಸಿದೆ ಎಂದು ಹೇಳಿದರು.
ಸಂಘವು ವಾರ್ಷಿಕ ವಹಿವಾಟಿನಲ್ಲಿ 91.84 ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು, 82.81 ಲಕ್ಷ ಕ್ರೋಡೀಕೃತ ವ್ಯಾಪಾರ ಲಾಭಗಳಿಸಿಕೊಂಡಿದೆ. ಸಂಘದ ಸದಸ್ಯರಿಗೆ ಕಳೆದ ಸಾಲಿನಂತೆಯೇ ಈ ಬಾರಿ ಶೇ. 25ರಷ್ಟು ಡಿವಿಡೆಂಡ್ ಫಂಡನ್ನು ನೀಡಲಾಗುವದು. ಅಲ್ಲದೇ ಸಂಘಕ್ಕೆ 62.12 ಲಕ್ಷ ಸದಸ್ಯರ ಪಾಲು ಹಣ ಬಂದಿದ್ದು, ಇತರ ಠೇವಣಿಯಲ್ಲಿ ಮತ್ತು ನಿಧಿಗಳಲ್ಲಿ 491.22 ಲಕ್ಷವಿದೆ. ಇತರ ಸಂಘ ಸಂಸ್ಥೆಗಳಲ್ಲಿ ಠೇವಣಿ ರೂಪದಲ್ಲಿ 71.65 ಲಕ್ಷ ರೂಪಾಯಿಯನ್ನು ತೊಡಗಿಸಲಾಗಿದೆ. ಸಂಘದ ಒಟ್ಟು ಸ್ಥಿರ ಆಸ್ತಿ ಮೌಲ್ಯ 271.16 ಲಕ್ಷಗಳಾಗಿವೆ.
ಸಂಘದ 83ನೇ ವಾರ್ಷಿಕ ಮಹಾಸಭೆಯು ಇದೇ ತಿಂಗಳ 21ರಂದು ಸಂಘದ ಸಭಾಂಗಣದಲ್ಲಿ ನಡೆಯಲಿದ್ದು, ಸದಸ್ಯರು ಗೈರು ಹಾಜರಾಗದೇ ಸಭೆಗೆ ಹಾಜರಾಗಿ ಸಂಘದ ಅಭಿವೃದ್ಧಿಗೆ ಪೂರಕ ವಾತಾವರಣವನ್ನು ನಿರ್ಮಿಸಲು ಸಲಹೆ ಸೂಚನೆ ನೀಡಬೇಕೆಂದು ಈ ಸಂದರ್ಭ ಮನವಿ ಮಾಡಿದರು. ಸಂಘವು ಅಭಿವೃದ್ಧಿಯನ್ನು ಹೊಂದಲು ಸದಸ್ಯರೊಂದಿಗೆ ಸಂಘದ ನಿರ್ದೇಶಕರು ಮತ್ತು ನೌಕರರ ಗಣನೀಯ ಸೇವೆಯೇ ಬಹುಮುಖ್ಯ ಎಂದು ಶ್ಲಾಘಿಸಿದರು. ಮುಂದಿನ ಅವಧಿಯಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದಲು ಮತ್ತು ಸಂಘದ ಸದಸ್ಯರುಗಳಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಲು ವಿವಿಧ ಯೋಜನೆಗಳನ್ನು ರೂಪಿಸುವ ಚಿಂತನೆ ಆಡಳಿತ ಮಂಡಳಿ ನಡೆಸಿದೆ ಎಂದು ಮಾಹಿತಿ ನೀಡಿದ ಅವರು ಕಳೆದ ಸಾಲಿನಲ್ಲಿ ಪ್ರಕೃತಿ ವಿಕೋಪದಲ್ಲಿ ಉಂಟಾದ ನೆರೆ ಸಂತ್ರಸ್ತರಿಗೆ ಸಂಘದ ಸದಸ್ಯರ ಊಟದ ಭತ್ಯೆಯ 100 ರೂಪಾಯಿಯನ್ನು 10 ಕುಟುಂಬಕ್ಕೆ ತಲಾ 20 ಸಾವಿರದಂತೆ 2 ಲಕ್ಷ ಹಣವನ್ನು ನೀಡಿರುವದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಪದಾರ್ಥಿ ಎಸ್. ಮಂಜುನಾಥ್, ನಿರ್ದೇಶಕರುಗಳಾದ ಮುದ್ದಿಯಡ ಎ. ಸೋಮಯ್ಯ, ಚೋಡುಮಾಡ ಪಿ. ಶ್ಯಾಮ್, ಬೊಟ್ಟಂಗಡ ದಶಮಿ ದೇಚಮ್ಮ, ಮೂಕಳೇರ ಪಿ. ಶಾರದ, ಬಿಲ್ಲವರ ಎಸ್. ಚಂದ್ರಶೇಖರ್, ಪುತ್ತಮನೆ ಜೀವನ್ ದೇವದಾಸ್, ಹೆಚ್.ಹೆಚ್. ತಮ್ಮಯ್ಯ, ಹಾಲುಮತದ ಎಂ. ಡಿಕ್ಕಿ, ಮತ್ತು ಕಾರ್ಯ ನಿರ್ವಹಣಾಧಿಕಾರಿ ಎಂ.ಟಿ. ಪೂನಂ ಉಪಸ್ಥಿತರಿದ್ದರು.
-ಎನ್.ಎನ್. ದಿನೇಶ್