ಬೆಂಗಳೂರು, ಸೆ. 20: ಇಂದು ಬೆಂಗಳೂರಿನ ಕಾರ್ಮಿಕರ ಕಚೇರಿಯಲ್ಲಿ ಕಾರ್ಮಿಕ ಆಯುಕ್ತ ಕೆ.ಜಿ. ಶಾಂತರಾಂ ಅವರ ಅಧ್ಯಕ್ಷತೆಯಲ್ಲಿ ಕನಿಷ್ಟ ವೇತನ ಸಲಹಾ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಕಾಫಿ ಕ್ಯೂರಿಂಗ್ ಕಾರ್ಮಿಕರ ಕನಿಷ್ಟ ವೇತನವನ್ನು ದಿನಕ್ಕೆ ರೂಪಾಯಿ 406.80 ಎಂದು ನಿಗದಿಗೊಳಿಸಲಾಯಿತು.

2011ರಲ್ಲಿ ಅಂತ್ಯಗೊಂಡ ಕಾಫಿ ಕ್ಯೂರಿಂಗ್ ಕಾರ್ಮಿಕರ ಕನಿಷ್ಟ ವೇತನ ಕಳೆದ ಎಂಟು ವರ್ಷಗಳಿಂದ ನಿಗದಿ ಮಾಡಿರಲಿಲ್ಲ. ಕಾಫಿ ಪ್ಲಾಂಟೇಷನ್ ಮತ್ತಿತರ ಕಾರ್ಮಿಕರ ಕನಿಷ್ಟ ವೇತನ ಕಳೆದ ಎಂಟು ವರ್ಷದಲ್ಲಿ ಮೂರು ಬಾರಿ ಪರಿಷ್ಕರಣೆಗೊಂಡಿದ್ದರೂ ಕಾಫಿ ಕ್ಯೂರಿಂಗ್ ಕಾರ್ಮಿಕರ ವೇತನ ಏರಿಕೆ ಆಗಿರಲಿಲ್ಲ. ಎರಡು ವ್ಯತ್ಯಾಸದ ತುಟ್ಟಿ ಭತ್ಯೆ ಕಾಫಿ ಕ್ಯೂರಿಂಗ್ ಕಾರ್ಮಿಕರ ಕನಿಷ್ಟ ವೇತನ ನಿಗದಿ(ಮೊದಲ ಪುಟದಿಂದ) ವೇತನದೊಂದಿಗೆ ಇಂದು ನಡೆದ ಕನಿಷ್ಟ ವೇತನ ಸಲಹಾ ಸಭೆಯಲ್ಲಿ ಕ್ಯೂರಿಂಗ್ ಕಾರ್ಮಿಕರ ಅನೇಕ ವರ್ಷಗಳ ಬೇಡಿಕೆಯನ್ನು ಕ್ಯೂರಿಂಗ್ ಮಾಲೀಕರ ಮನ ಒಲಿಸಿದ ಕಾರ್ಮಿಕ ಆಯುಕ್ತ ಕೆ.ಜಿ. ಶಾಂತರಾಂ ಮತ್ತು ಜಂಟಿ ಕಾರ್ಮಿಕ ಆಯುಕ್ತ ಡಾ. ಬಾಲಕೃಷ್ಣ ಸಹಮತದೊಂದಿಗೆ ಕನಿಷ್ಟ ವೇತನ ನಿಗದಿಗೊಳಿಸಿದರು.

ಕೊಡಗಿನ ಕಾಫಿ ಕ್ಯೂರಿಂಗ್ ಕಾರ್ಮಿಕರನ್ನು ಮಲೆನಾಡು ತೋಟ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಇಂಟಕ್ ಪ್ರತಿನಿಧಿ ಎ.ಪಿ. ಸೆಲ್ವಂ ಪ್ರತಿನಿಧಿಸಿದ್ದರು. ಸಭೆಯಲ್ಲಿ ಟಾಟಾ ಕಾರ್ಮಿಕ ನಾಯಕರಾದ ಮೀನಾಕ್ಷಿ ಸುಂದರಂ ಸಿಐಟಿಯು,ಜಿ.ಆರ್.ಶಿವಶಂಕರ್ ಪ್ರಧಾನ ಕಾರ್ಯದರ್ಶಿ ಟಿಯುಸಿಸಿ ವಿಜಯ ಭಾಸ್ಕರ್ ಎಐಟಿಯುಸಿ ಇಂಟಕ್ ಎ.ಪಿ.ಸೆಲ್ವಂ, ಹೆಚ್‍ಎಂಎಸ್ ಶ್ರೀಕಂಠಯ್ಯ ಮತ್ತು ಮಾಲೀಕರ ಪರವಾಗಿ ಟಾಟಾ ಕಾಫಿಯ ವಿಜಯ ಕಾರ್ನಾಡ್ ಮತ್ತು ಕಾಫಿ ಕ್ಯೂರಿಂಗ್ ಮಾಲೀಕರ ಸಂಘದ ಅಧ್ಯಕ್ಷ ದೇವರಾಜ್ ಭಾಗವಹಿಸಿದ್ದರು.

- ವರದಿ: ಎಂ. ಯೂಸುಫ್ ಪಟೇಲ್