ಮಡಿಕೇರಿ, ಸೆ. 20: ರಷ್ಯಾದಲ್ಲಿ ಜರುಗುತ್ತಿರುವ ವಿಶ್ವ ಬಾಕ್ಸಿಂಗ್ ಚಾಂಪಿ ಯನ್ ಶಿಪ್‍ನಲ್ಲಿ ಭಾರತಕ್ಕೆ ಎರಡು ಪದಕಗಳು ಖಚಿತ ಗೊಂಡಿವೆ. ಭಾರತ ಇದೇ ಮೊದಲ ಬಾರಿಗೆ ಒಂದೇ ವಿಶ್ವ ಚಾಂಪಿ ಯನ್ ಶಿಪ್‍ನಲ್ಲಿ ಒಂದಕ್ಕಿಂತ ಹೆಚ್ಚು ಪದಕ ಗಳಿಸುತ್ತಿರುವದು ವಿಶೇಷವಾಗಿದೆ. ಏಷ್ಯನ್ ಚಾಂಪಿಯನ್ 23 ವರ್ಷದ ಅಮಿತ್ ಹಾಂದಲ್ 52 ಕೆ.ಜಿ. ವಿಭಾಗದ ಕ್ವಾರ್ಟರ್ ಫೈನಲ್‍ನಲ್ಲಿ ಹಾಗೂ ಕಾಮನ್‍ವೆಲ್ತ್ ಗೇಮ್ಸ್ ರಜತ ಪದಕ ವಿಜೇತ ಮನೀಶ್ ಕೌಶಿಕ್ 63 ಕೆ.ಜಿ. ವಿಭಾಗದಲ್ಲಿ ಬ್ರೆಜಿಲ್‍ನ ಸ್ಪರ್ಧಿ ಎದುರು ಗೆಲವು ದಾಖಲಿಸಿ ಸೆಮಿಫೈನಲ್ ಪ್ರವೇಶಿಸಿದ್ದು, ದೇಶಕ್ಕೆ ಇದರಿಂದ ಎರಡು ಪದಕ ಖಚಿತವಾಗಿದೆ. ಭಾರತ ಬಾಕ್ಸಿಂಗ್ ತಂಡದ ಮುಖ್ಯ ಕೋಚ್ ಆಗಿ ದ್ರೋಣಾಚಾರ್ಯ ಪ್ರಶಸ್ತಿ ಪಡೆದಿರುವ ಕೊಡಗಿನವರಾದ ಚೇನಂಡ ವಿಶು ಕುಟ್ಟಪ್ಪ ಕಾರ್ಯನಿರ್ವಹಿಸುತ್ತಿರುವದು ಕೊಡಗಿನ ಪಾಲಿಗೂ ವಿಶೇಷವಾಗಿದೆ.