ಗೋಣಿಕೊಪ್ಪ ವರದಿ, ಸೆ. 16: ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನೂತನ ಘಟಕ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮ ಮಂಗಳವಾರ ತಾ. 17 ರಂದು (ಇಂದು) ಇಲ್ಲಿನ ಸಾಮಥ್ರ್ಯಸೌಧ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಂಡ ಕಾರ್ಯಪ್ಪ ಉದ್ಘಾಟನೆ ಮಾಡಲಿದ್ದಾರೆ. ಅಧ್ಯಕ್ಷತೆ ಯನ್ನು ಕ.ಸಾ.ಪ. ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ವಹಿಸಲಿದ್ದಾರೆ. ಅತಿಥಿಗಳಾಗಿ ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ, ಸಮಾಜ ಸೇವಕ ಮೂಕಳೇರ ಕುಶಾಲಪ್ಪ, ಕಸಾಪ ಜಿಲ್ಲಾ ನಿರ್ದೇಶಕ ಶ್ರೀಧರ್ ನೆಲ್ಲಿತ್ತಾಯ, ಕೆ. ಆರ್. ಬಾಲಕೃಷ್ಣರೈ ಪಾಲ್ಗೊಳ್ಳಲಿದ್ದಾರೆ.
ಅಧಿಕಾರ ಸ್ವೀಕಾರ: ನಿಯೋಜಿತ ಅಧ್ಯಕ್ಷ ಡಾ. ಕೆ. ಎನ್. ಚಂದ್ರಶೇಖರ್, ಗೌ. ಕಾರ್ಯದರ್ಶಿಯಾದ ಸುಮಿ ಸುಬ್ಬಯ್ಯ, ಶೀಲಾ ಬೋಪಣ್ಣ, ಖಜಾಂಜಿ ಸಣ್ಣುವಂಡ ಚಂಗಪ್ಪ, ನಿರ್ದೇಶಕರಾದ ಟಿ. ಎಸ್. ಹೇಮಾವತಿ, ಡಾ. ಆನಂದ ಕಾರ್ಲ, ಡಾ. ಜಡೇಯ ಗೌಡ, ಅನಂತಕೃಷ್ಣ, ಪ್ರಮೋದ್‍ಕಾಮತ್, ಕಾಡ್ಯಮಾಡ ಪ್ರಕಾಶ್ ಮೊಣ್ಣಪ್ಪ, ಕಡೇಮಾಡ ಸುನಿಲ್ ಮಾದಪ್ಪ, ಸಣ್ಣುವಂಡ ಕಿಶೋರ್ ನಾಚಪ್ಪ, ಎನ್. ಬಿ. ರುದ್ರಪ್ಪ, ನೂರೇರ ರತಿ ಅಚ್ಚಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೈಶೈಲ ಬೀಳಗಿ ಅಧಿಕಾರ ಸ್ವೀಕರಿಸಲಿದ್ದಾರೆ.