ಪೆರಾಜೆ, ಸೆ.16: ಇಲ್ಲಿಗೆ ಸಮೀಪದ ಗಡಿಗುಡ್ಡೆಯಿಂದ ಅಮೆಚೂರುವರೆಗಿನ ಕಾವೇರಿ ರಸ್ತೆಯ ಸುಮಾರು 4 ಕಿಲೋ ಮೀಟರ್ ದೂರ ರಸ್ತೆ ಬದಿಯ ಕಳೆ, ಗಿಡಗಂಟಿಗಳನ್ನು ಚಿಗುರು ಯುವಕಮಂಡಲದ ಸದಸ್ಯರು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಕಾರ್ಯದಲ್ಲಿ ಚಿಗುರು ಯುವಕಮಂಡಲದ ಅಧ್ಯಕ್ಷ ಶೀತಲ್ ಕುಂಬಳಚೇರಿ,
ಗೌರವಾಧ್ಯಕ್ಷ ಅನಿಲ್ ಕುಂಬಳಚೇರಿ, ಉಪಾಧ್ಯಕ್ಷ ಭುವನ್ ಕುಂಬಳಚೇರಿ ಕಾರ್ಯದರ್ಶಿ ನಿಶಾಂತ್ ಮಜಿಕೋಡಿ, ಖಜಾಂಚಿ ರಜತ್, ಮಜಿಕೋಡಿ ಗ್ರಾಮ ಪಂಚಾಯತ್ ಸದಸ್ಯ ಉದಯಚಂದ್ರ ಕುಂಬಳಚೇರಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.
- ಕಿರಣ್ ಕುಂಬಳಚೇರಿ