ಮಡಿಕೇರಿ, ಸೆ. 16: ಜಿಲ್ಲೆಯ ಮುಸ್ಲಿಂ ಪಂಡಿತ ಸಂಘಟನೆಯಾದ ‘ಕೂರ್ಗ್ ಜಂಇಯತುಲ್ ಉಲಮಾ’ದ ವಾರ್ಷಿಕ ಮಹಾಸಭೆ ಇತ್ತೀಚೆಗೆ ಕೊಂಡಂಗೇರಿ ಶಾದಿ ಮಹಲ್‍ನಲ್ಲಿ ನಡೆಯಿತು. ಸಂಘಟನೆಯ ನೂತನ ಅಧ್ಯಕ್ಷರಾಗಿ ಜಿಲ್ಲೆಯ ಉಪಖಾಝಿ ಹಾಜಿ ಕೆ.ಎ. ಮಹಮೂದ್ ಮುಸ್ಲಿಯಾರ್ ಆಯ್ಕೆಗೊಂಡಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಅನ್ವಾರುಲ್‍ಹುದಾ ವಿದ್ಯಾಸಂಸ್ಥೆಯ ಮುಖ್ಯಸ್ಥ ಅಶ್ರಫ್ ಅಹ್ಸನಿ ಅವರು ಆಯ್ಕೆಯಾಗಿದ್ದಾರೆ.

ಕೋಶಾಧಿಕಾರಿಯಾಗಿ ಕೆ.ಎಂ. ಹುಸೈನ್ ಸಖಾಫಿ, ಉಪಾಧ್ಯಕ್ಷರುಗಳಾಗಿ ಕೆ.ಎಸ್. ಶದುಲಿ ಫೈಝಿ, ಅಬ್ದುಲ್ ಮಜೀದ್ ಮದನಿ, ಶಾದುಲಿ ಫೈಝಿ ಆಝಾದ್‍ನಗರ ಆಯ್ಕೆಯಾಗಿದ್ದಾರೆ.

ಸಹಕಾರ್ಯದರ್ಶಿಗಳಾಗಿ ಉಸ್ಮಾನ್ ಮದನಿ ಕೊಳಕೇರಿ, ಹನೀಫ್ ಸಖಾಫಿ ಕೊಂಡಂಗೇರಿ, ಮುಸ್ತಫಾ ಸಖಾಫಿ ಹುಂಡಿ, ಹಮಿದ್ ಮದನಿ ಮಡಿಕೇರಿ, ಕಾರ್ಯನಿರತ ಕಾರ್ಯದರ್ಶಿಯಾಗಿ ಉಮರ್ ಸಖಾಫಿ ಎಡಪಾಲ ಇವರುಗಳು ಆಯ್ಕೆಗೊಂಡಿದ್ದಾರೆ.

ಹಫೀಲ್ ಸಅದಿ, ಅಹ್ಮದ್ ಹಾಜಿ, ಇಸ್ಮಾಈಲ್ ಸಖಾಫಿ, ಶಿಹಾಬುದ್ದೀನ್ ತಙಳ್, ಇಲ್ಲಾಸ್ ತಙಳ್ ಇವರುಗಳನ್ನು ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಆಯ್ಕೆಗೊಳಿಸಲಾಗಿದೆ.