ಮಡಿಕೇರಿ, ಸೆ. 15: ಈಶಾ ಫೌಂಡೇಶನ್ ಮೂಲಕ ಸಹಸ್ರ ಕೋಟಿ ಕಾವೇರಿ ಗಿಡ ನೆಡಲು ಮತ್ತು ಹಣ ವಸೂಲು ಮಾಡಲು ಮುಂದಾಗಿರುವ ಕ್ರಮದ ವಿರುದ್ಧ ಬೆಂಗಳೂರಿನ ವಕೀಲ ಎ.ವಿ. ಅಮರನಾಥನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಮುಖ್ಯ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಒಂದು ಖಾಸಗಿ ಸಂಸ್ಥೆ ಸರಕಾರಿ ಜಾಗದಲ್ಲಿ ಗಿಡ ನೆಡುವಂತಿಲ್ಲ ಮತ್ತು ಆ ಬಗ್ಗೆ ಹಣ ವಸೂಲಿ ಮಾಡುವಂತಿಲ್ಲ ಎಂದು ವಕೀಲರು ಹೇಳಿದ್ದಾರೆ. ಒಟ್ಟು 236 ಕೋಟಿ ಸಸಿ ನೆಡಲು ಗಿಡವೊಂದÀಕ್ಕೆ ರೂ. 42 ರಂತೆ ಒಟ್ಟು ರೂ. 10.626 ಕೋಟಿ ಹಣ ಸಂಗ್ರಹಿಸಲು ಜಗ್ಗಿ ವಾಸುದೇವ್ ಅವರ ಈಶಾ ಫೌಂಡೇಶನ್ ಮುಂದಾಗಿದೆ.

ಸರಕಾರಿ ಒಪ್ಪಿಗೆಯಿಲ್ಲದೆ ಈ ಕೆಲಸ ಅಸಾಧ್ಯ ಎಂದಿರುವ ಅವರು ಕರ್ನಾಟಕ ಸರಕಾರ ಇದಕ್ಕೆ ಒಪ್ಪಿಗೆ ನೀಡಿಲ್ಲ ಎಂದಿದ್ದಾರೆ. ಪ್ರಕರಣವನ್ನು ನ್ಯಾಯಾಲಯ ತಾ. 17ಕ್ಕೆ ಇರಿಸಿದೆ.