ಮಡಿಕೇರಿ, ಸೆ. 15: ಮಡಿಕೇರಿ ದಸರಾ ಜನೋತ್ಸವ ಅಂಗವಾಗಿನ ಸಾಂಸ್ಕøತಿಕ ಕಾರ್ಯಕ್ರಮಗಳು ತಾ. 30 ರಿಂದ ಅಕ್ಟೋಬರ್ 8 ರವರೆಗೆ ಜರುಗಲಿದೆ.

ಈ ದಿನಗಳಲ್ಲಿ ಮಡಿಕೇರಿಯ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಆಯೋಜಿತ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಕಲಾವಿದರಿಂದ, ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಕಲಾವಿದರು, ಕಲಾತಂಡಗಳು ತಮ್ಮ ಹೆಸರು, ಪ್ರದರ್ಶಿಸಲು ಇಚ್ಚಿಸುವ ಕಲಾಪ್ರಕಾರ, ಅನುಭವ, ತಂಡದಲ್ಲಿನ ಕಲಾವಿದರ ಸಂಖ್ಯೆ, ವಿಳಾಸ, ಸಂಪರ್ಕ ದೂರವಾಣಿ ಇತ್ಯಾದಿ ವಿವರಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಮಡಿಕೇರಿ ದಸರಾ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಅರ್ಜಿ ಸಲ್ಲಿಸಲು ತಾ. 22 ಕೊನೆ ದಿನವಾಗಿರುತ್ತದೆ. ಅನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವದಿಲ್ಲ ಎಂದು ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಆರ್.ಬಿ. ರವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ: ಆರ್.ಬಿ. ರವಿ. ಅಧ್ಯಕ್ಷರು, ಸಾಂಸ್ಕøತಿಕ ಸಮಿತಿ ಮಡಿಕೇರಿ ನಗರ ದಸರಾ ಜನೋತ್ಸವ, ದಸರಾ ಜನೋತ್ಸವ ಕಚೇರಿ, ನಗರಸಭೆ ಸಂಕಿರ್ಣ, ಮಡಿಕೇರಿ -571201. ದಸರಾ ಸಾಂಸ್ಕøತಿಕ ಸಮಿತಿ ಸಂಪರ್ಕ ಮೊಬೈಲ್. 8660306573. 9844060174, ಇ-ಮೇಲ್: mಚಿಜiಞeಡಿiಜಚಿsಚಿಡಿಚಿ@gmಚಿiಟ.ಛಿom.