ಮಡಿಕೇರಿ, ಸೆ. 15: ನಗರದ ಡಿಪೋ ಬಳಿಯ ಶಾಂತಿನಿಕೇತನ ಹಾಗೂ ಆಶೋಕಪುರದ ಗಣೇಶೋತ್ಸವ ಸಮಿತಿಯಿಂದ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಅದ್ಧೂರಿಯಾಗಿ ಶೋಭಾಯಾತ್ರೆ ಮೂಲಕ ಗೌರಿ ಕೆರೆಯಲ್ಲಿ ವಿಸರ್ಜಿಸಲಾಯಿತು.
ಅದ್ಧೂರಿ ಪ್ರಭಾವಳಿ ಪೌರಣಿಕ ಕಥಾ ಸಾರಂಶ ಸಾರುವ ಶೋಭಾಯಾತ್ರೆ ಜನಮನ ಅಕರ್ಷಿಸಿತು. ಡಿಪೋ ಬಳಿಯಿಂದ ಹೊರಟ ಶಾಂತಿನಿಕೇತನ ಸಮಿತಿಯ ಶೋಭಾಯಾತ್ರೆಯಲ್ಲಿ ಗಜಾನನನಿಂದ ಗಜಾಸುರನ ವಧೆ ಎಂಬ ಕಥಾ ಸಾರಾಂಶವನ್ನು ಪ್ರದರ್ಶಿಸಲಾಯಿತು.
ಆದಿಪೂಜಿತನಿಂದ ಯಮನ ಗರ್ವಭಂಗ ಎಂಬ ಕಥಾ ಸಾರಾಂಶವನ್ನು ಅಶೋಕಪುರದ ಗೌರಿಗಣೇಶೋತ್ಸವ ಸಮಿತಿ ಪ್ರದರ್ಶಿಸಿತು.