ಗೋಣಿಕೊಪ್ಪಲು, ಸೆ. 15: ಪೆÇನ್ನಂಪೇಟೆ ಸಂತ ಅಂತೋಣಿ ದೇವಾಲಯದಲ್ಲಿ ಒಂಬತ್ತು ದಿನಗಳ ಕಾಲದ ಮಾತೆ ಮರಿಯಮ್ಮನ ಜನ್ಮೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ವಿಶ್ವ ಧರ್ಮ ಸಭೆಯಲ್ಲಿಯೂ ಮಾತೆ ಮರಿಯಮ್ಮನ ಜನ್ಮ ದಿನವನ್ನು ವರ್ಷಂಪ್ರತಿ ಆಚರಿಸಲಾಗುವದೆಂದು ಪೆÇನ್ನಂಪೇಟೆ ಸಂತ ಅಂತೋಣಿ ಸಂಯುಕ್ತ ಪ.ಪೂ. ಕಾಲೇಜಿನ ಪ್ರಾಂಶುಪಾಲ ರೆವರೆಂಡ್ ಫಾದರ್ ಡೇವಿಡ್ ಸಗಾಯರಾಜ್ ತಿಳಿಸಿದ್ದಾರೆ. ಉದ್ದೇಶಿತ ಹಬ್ಬವನ್ನು ಪ್ರತಿಯೊಂದು ಚರ್ಚ್‍ನಲ್ಲಿಯೂ ಒಂಬತ್ತು ದಿನಗಳ ಕಾಲ ನೊವೇನಾ ಪ್ರಾರ್ಥನೆಯೊಂದಿಗೆ ನೆರವೇರಿಸಿ, ಮಾತೆ ಮರಿಯಮ್ಮನ ಸ್ವರೂಪಕ್ಕೆ ಹೂಗಳ ಅರ್ಚನೆಯನ್ನು ಮಾಡಲಾಗುತ್ತದೆ. ಪೆÇನ್ನಂಪೇಟೆ ಮುಖ್ಯ ರಸ್ತೆಯಲ್ಲಿ ಯೇಸುವಿನ ತಾಯಿ ಮಾತೆ ಮರಿಯಮ್ಮ ತೇರು ಮೆರವಣಿಗೆ ಹಾಗೂ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದು, ಸಹಭೋಜನವನ್ನೂ ಏರ್ಪಡಿಸಲಾಗಿತ್ತು.