ಭಾಗಮಂಡಲ, ಸೆ. 13: ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ವೆಟಿವೆÀರ್ ಹುಲ್ಲನ್ನು ಬೆಳೆಸಲು ಅಲ್ಲಿಗೆ ಒಯ್ದು ನೆಡುವಿಕೆ ಕಾರ್ಯಕ್ಕೆ ಶ್ರಮದಾನ ನಡೆಸಲಾಯಿತು. ಇಂದು ಅರಣ್ಯ ಇಲಾಖೆ, ಕೊಡಗು ಸೇವಾ ಕೇಂದ್ರ, ಶ್ರೀ ಭಗಂಡೇಶ್ವರ-ತಲಕಾವೇರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ, ಅರ್ಚಕ ಸಮೂಹ ಮತ್ತು ಎನ್.ಸಿ.ಸಿ ವಿದ್ಯಾರ್ಥಿ ಸಮೂಹದಿಂದ ಹುಲ್ಲನ್ನು ನೆಡಲಾಯಿತು. ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಕಾಣಿಸಿಕೊಂಡಿರುವ ಬಿರುಕು ಸಂಬಂಧ ಬೆಟ್ಟ ಜಾರದಂತೆ ತಡೆಯಲು ವೆಟಿವೆÀರ್ ತಳಿಯ ಹುಲ್ಲನ್ನು ನಾಟಿ ಮಾಡಲಾಯಿತು. ಹಿರಿಯರಾದ ನೆಲ್ಲಮಕ್ಕಡÀ ಶಂಭು ಮತ್ತು ಕ್ಷೇತ್ರ ಅರ್ಚಕರಾದ ನಾರಾಯಣ ಆಚಾರ್ ಉದ್ಘಾಟಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ತಲಕಾವೇರಿಯ ಬ್ರಹ್ಮಗಿರಿ ಬೆಟ್ಟವು ಈಗಾಗಲೇ ನಿರಂತರ ಸುರಿಯುವ ಮಳೆಗೆ ತುತ್ತಾಗಿ ಬಿರುಕು ಬಿಟ್ಟಿದ್ದು ಅದನ್ನು ತಡೆಹಿಡಿಯುವ ಶಕ್ತಿಯು ತಮಿಳುನಾಡಿನ ‘ವೆಟಿವೆÀರ್’ ಎನ್ನುವ ಹುಲ್ಲಿಗಿದೆ ಎನ್ನುವದು ತಜ್ಞರ ಅಭಿಮತ. ಹುಲ್ಲನ್ನು ಬೆಳೆಸಿರುವ ತೇಲಪಂಡ ಪ್ರಮೋದ್ ಅವರು ಮಾತನಾಡುತ್ತಾ ವೆಟಿವÉರ್ ಎನ್ನುವ ಹುಲ್ಲಿನ ಬೇರು ಸುಮಾರು 18 ಅಡಿ ಭೂಮಿಯ ಕೆಳಗೆ ಹರಡುವದರಿಂದ ಮಳೆ ಜಾಸ್ತಿಯಾಗಿ ಬರೆಯ ಮಣ್ಣು ಹದಗೊಳ್ಳುವದನ್ನು ತಡೆಯಬಹುದೆಂದರು. ಈ ಹುಲ್ಲನ್ನು ಕಳೆದ ವರ್ಷದ ಪ್ರಕೃತಿ ವಿಕೋಪ ನಡೆದ ಸ್ಥಳಗಳಿಗೆ ಕುಪ್ಪಂಡ ಪ್ರೇಮನಾಥ್ ಅವರು ಕುನ್ನೂರುನಿಂದ ತಂದು ತಮ್ಮ ಹಾಕತ್ತೂರಿನ ಗದ್ದೆಯಲ್ಲಿ ಬೆಳೆÀಸಲಾಗಿದೆಯೆಂದರು. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಿದ್ದಾಟಂಡ ತಮ್ಮಯ್ಯ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಮ್ಮತಿ ಕೊಡವ ಸಮಾಜದ ನಿರ್ದೇಶಕರಾದ ಮುಕ್ಕಾಟಿರ ಸುರೇಶ್ , ಸೇವಾ ಕೇಂದ್ರದ ತಮ್ಮು ಪೂವಯ್ಯ, ಮಂದಪಂಡ ಸತೀಶ್, ಮಣವಟ್ಟಿರ ದೊರೆ ಮುಂತಾದವರು ಪಾಲ್ಗೊಂಡಿದ್ದರು.

-ವರದಿ: ಸುನಿಲ್, ಪಪ್ಪು