ಟಿ ಇಂದಿನಿಂದ ಟರ್ಫ್ ಮೈದಾನದಲ್ಲಿ ಪಂದ್ಯ ಟಿ 12 ಕಾಲೇಜು ಭಾಗಿ ಮಡಿಕೇರಿ, ಸೆ. 13: ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ಮಡಿಕೇರಿಯ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜಿನ ಸಹಭಾಗಿತ್ವದಲ್ಲಿ ತಾ. 14 ರಂದು (ಇಂದು) ನಗರದ ಸಾಯಿ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಮಂಗಳೂರು ವಿ.ವಿ. ಅಂತರಕಾಲೇಜು ಮಹಿಳಾ ಹಾಕಿ ಪಂದ್ಯಾವಳಿ ಜರುಗಲಿದೆ.ಪುಳ್ಳಂಗಡ ಚಿಣ್ಣಪ್ಪ ಸ್ಮಾರಕ ಮಹಿಳಾ ರೋಲಿಂಗ್ ಟ್ರೋಫಿ ಪಂದ್ಯಾವಳಿ ಇದಾಗಿದ್ದು, ವಿ.ವಿ. ಅಧೀನದ ಪ್ರತಿಷ್ಠಿತ 12 ಕಾಲೇಜು ತಂಡಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿವೆ. ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ವಿವಿಧ ಕಾಲೇಜು ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದು, ತಾ. 14 ರಂದು (ಇಂದು) ಬೆಳಿಗ್ಗೆ 10.30ಕ್ಕೆ ಸಾಯಿ ಮೈದಾನದಲ್ಲಿ ಉದ್ಘಾಟನೆಗೊಳ್ಳಲಿದೆ. ಇಂಟರ್ ನ್ಯಾಷನಲ್ ಹಾಕಿ ಫೆಡರೇಷನ್‍ನ ಟೆಕ್ನಿಕಲ್ ಅಫಿಷಿಯಲ್ ಪುಳ್ಳಂಗಡ ರೋಹಿಣಿ ಬೋಪಣ್ಣ ಅವರು ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ಅತಿಥಿಗಳಾಗಿ ಮಾಜಿ ಅಂತರರಾಷ್ಟ್ರೀಯ ಹಾಕಿ ಆಟಗಾರ ಪುಳ್ಳಂಗಡ ಬೋಪಣ್ಣ ಅವರು ಪಾಲ್ಗೊಳ್ಳಲಿದ್ದು, ಫೀ.ಮಾ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಗತ್ ತಿಮ್ಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.

ಪಾಲ್ಗೊಳ್ಳುತ್ತಿರುವ ಕಾಲೇಜುಗಳುಆಳ್ವಾಸ್ ಮೂಡಬಿದರೆ, ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು, ಕಾವೇರಿ ಕಾಲೇಜು ಗೋಣಿಕೊಪ್ಪಲು, ಶ್ರೀದೇವಳ ಕಾಲೇಜು, ಮೂಡಬಿದರೆ, ಮಂಗಳೂರು ವಿ.ವಿ. ಮಾನಸ ಗಂಗೋತ್ರಿ, ಕಾವೇರಿ ಕಾಲೇಜು, ಸಂತಜೋಸೆಫರ ಕಾಲೇಜು ಸೋಮವಾರಪೇಟೆ, ಎಫ್‍ಎಂಸಿ ಮಡಿಕೇರಿ.