ವೀರಾಜಪೇಟೆ, ಸೆ. 13: ಕೊಡಗು ಜಿಲ್ಲಾ ಮಟ್ಟದ 14 ಮತ್ತು 17ರ ವಯೋಮಿತಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟ ತಾ. 16 ರಿಂದ 20ರವರೆಗೆ ಸಂತ ಅನ್ನಮ್ಮ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಸಂತ ಅನ್ನಮ್ಮ ಶಾಲಾ ವ್ಯವಸ್ಥಾಪಕ ಫಾ. ಮದಲ್ಯೆ ಮುತ್ತು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಬಾರಿ ಕ್ರೀಡಾ ಕೂಟದ ಜವಬ್ದಾರಿಯನ್ನು ಸಂತ ಅನ್ನಮ್ಮ ಶಾಲಾ ಆಡಳಿತ ಮಂಡಳಿ ವಹಿಸಿಕೊಂಡಿದೆ. ತಾ 18ರಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಾಲಕ ಬಾಲಕಿಯರ ಹಾಕಿ ಪಂದ್ಯಾಟ ಮಾತ್ರ ತಾ. 17ರಂದು ಪೊನ್ನಂಪೇಟೆಯ ಕೃತಕ ಹುಲ್ಲು ಹಾಸಿನ ಮ್ಯೆದಾನದಲ್ಲಿ ನಡೆಯಲಿದೆ. ತಾ. 20 ರಂದು ಸಮಾರೋಪ ಸಮಾರಂಭ ಬಹುಮಾನ ವಿತರಣಾ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.