ಮಡಿಕೇರಿ, ಸೆ. 14: ಪ್ರಸ್ತುತ ಹಾಕಿ ಪಂದ್ಯಾಟದ ನಿಯಮಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಹಾಕಿ ಪಟುಗಳು ಅವುಗಳ ಬಗ್ಗೆ ಅರಿತುಕೊಂಡು ಹಾಕಿ ಕ್ರೀಡೆಯಲ್ಲಿ ಮುಂದುವರೆಯುವಂತೆ ಇಂಟರ್ ನ್ಯಾಷನಲ್ ಹಾಕಿ ಫೆಡರೇಷನ್‍ನ ಟೆಕ್ನಿಕಲ್ ಅಫಿಷಿಯಲ್ ಪುಳ್ಳಂಗಡ ರೋಹಿಣಿ ಬೋಪಣ್ಣ ಕಿವಿಮಾತು ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲ ಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸಹಭಾಗಿತ್ವದಲ್ಲಿ ನಗರದ ಸಾಯಿ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಮಂಗಳೂರು ವಿ.ವಿ. ಅಂತರಕಾಲೇಜು ಮಹಿಳಾ ಹಾಕಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಬಹಳ ವರ್ಷಗಳ ಹಿಂದೆ ಹಾಕಿಪಟು ಮಹಿಳಾ ಹಾಕಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಬಹಳ ವರ್ಷಗಳ ಹಿಂದೆ ಹಾಕಿಪಟು ರೀತಿಯ ಸೌಕರ್ಯಗಳು ಹಾಕಿಪಟು ಗಳಿಗೆ ಸಿಗುತ್ತಿದೆ. ಆಟದಲ್ಲಿ ಸೋಲು- ಗೆಲವು ಮುಖ್ಯವಲ್ಲ.

(ಮೊದಲ ಪುಟದಿಂದ) ಪಾಲ್ಗೊಳ್ಳುವಿಕೆ ಮುಖ್ಯ. ಕಠಿಣ ಅಭ್ಯಾಸ ಹಾಗೂ ಪರಿಶ್ರಮದಿಂದ ಹಾಕಿಯಲ್ಲಿ ಬೆಳವಣಿಗೆ ಕಾಣಲು ಸಾಧ್ಯ. ಹಾಕಿ ಅಪಾಯದ ಆಟ ಎಂಬ ಮಾತಿದೆ. ಆದರೆ ಜಾಗರೂಕತೆಯಿಂದ ಆಸಕ್ತಿ ವಹಿಸಿ ಆಡಿದಲ್ಲಿ ಹಾಕಿಯಷ್ಟು ಉತ್ತಮ ಕ್ರೀಡೆ ಮತ್ತೊಂದಿಲ್ಲ ಎಂದು ರೋಹಿಣಿ ಬೋಪಣ್ಣ ಅಭಿಪ್ರಾಯಪಟ್ಟರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಫೀ.ಮಾ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಗತ್ ತಿಮ್ಮಯ್ಯ ಮಾತನಾಡಿ, ಕ್ರೀಡಾಪಟುಗಳು ಏಕಾಗ್ರತೆಯೊಂದಿಗೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವಂತಾಗ ಬೇಕೆಂದು ಸಲಹೆಯಿತ್ತರು.

ಅಂತರ್ರಾಷ್ಟ್ರೀಯ ಮಾಜಿ ಹಾಕಿ ಗೋಲ್ ಕೀಪರ್ ಪುಳ್ಳಂಗಡ ಯು. ಬೋಪಣ್ಣ, ಮಂಗಳೂರು ವಿ.ವಿ.ಯ ರಮೇಶ್ ಅತಿಥಿಯಾಗಿ ಪಾಲ್ಗೊಂಡಿದ್ದರು. ಯಕ್ಷಿತ್ ನಿರೂಪಿಸಿ, ಪವಿತ್ರ ತಂಡ ಪ್ರಾರ್ಥಿಸಿತು. ಕಾಲೇಜಿನ ಉಪನ್ಯಾಸಕ ಸಚಿನ್ ಸ್ವಾಗತಿಸಿ, ದೈಹಿಕ ನಿರ್ದೇಶಕ ರಮೇಶ್ ವಂದಿಸಿದರು.

ಕಾರ್ಯಪ್ಪ ಕಾಲೇಜಿಗೆ ಗೆಲವು

ಮಡಿಕೇರಿಯ ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜು ತಂಡವು 1-0 ಗೋಲಿನಿಂದ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ತಂಡದ ವಿರುದ್ಧ ಗೆಲುವು ಸಾಧಿಸಿತು.

ಪಂದ್ಯದ ಮೊದಲಾರ್ಧದಲ್ಲೇ ಗೋಲು ಬಾರಿಸುವಲ್ಲಿ ಯಶಸ್ವಿಯಾದ ಫೀ.ಮಾ. ಕಾರ್ಯಪ್ಪ ಕಾಲೇಜು ತಂಡ ಎದುರಾಳಿ ತಂಡವನ್ನು ಗೋಲು ದಾಖಲಿಸದಂತೆ ಮಾಡುವಲ್ಲಿ ಸಫಲವಾಯಿತು. ಆಳ್ವಾಸ್ ಕಾಲೇಜಿಗೆ ದೊರೆತ ಒಂದು ಪೆಲಾನ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸುವಲ್ಲಿ ಆಟಗಾರರು ಎಡವಿದರು.

ಮೊದಲನೇ ಸೆಮಿಫೈನಲ್ ಪಂದ್ಯದಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ತಂಡವನ್ನು ಮಡಿಕೇರಿಯ ಫೀ.ಮಾ.ಕೆ.ಎಂ. ಕಾಲೇಜು ತಂಡ 4-0 ಗೋಲಿನಿಂದ ಸುಲಭವಾಗಿ ಸೋಲಿಸಿತು. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ಹಾಗೂ ಮೂಡಬಿದಿರಿಯ ಆಳ್ವಾಸ್ ಪದವಿ ಕಾಲೇಜು ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು 4-0 ಗೋಲುಗಳಿಂದ ಗೆಲುವು ಸಾಧಿಸಿತು.