ವೀರಾಜಪೇಟೆ, ಸೆ. 13: ವೀರಾಜಪೇಟೆ ಕೊಡವ ಸಮಾಜದಿಂದ ತಾ. 15ರಂದು ಕೈಲ್ ಮುಹೂರ್ತ ಅಂಗವಾಗಿ ಆಯೋಜಿಸಿರುವ ಕ್ರೀಡಾಕೂಟದಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಫರ್ಧೆಗೆ ಪಟ್ಟಡ ಗಣೇಶ್ ಅವರ ಜ್ಞಾಪಕಾರ್ಥವಾಗಿ ಅವರ ಪತ್ನಿ ಮೀನಾ ಗಣೇಶ್, ಅವರ ಮಕ್ಕಳಾದ ಸಚಿನ್ ನಂಜಪ್ಪ, ದರ್ಶನ್ ನಂಜಪ್ಪ ಅವರು 5 ವರ್ಷದವರೆÀಗೆ ಬೆಳ್ಳಿಯ ರೋಲಿಂಗ್ ಟ್ರೋಫಿಯನ್ನು ಮೊದಲ ಸ್ಥಾನದ ವಿಜೇತರಿಗೆ ನೀಡಿದ್ದಾರೆ ಎಂದು ಕೊಡವ ಸಮಾಜದ ಕ್ರೀಡಾ ಕಾರ್ಯದರ್ಶಿ ಕನ್ನಂಬಿರ ಡಿ. ಚಿಣ್ಣಪ್ಪ ತಿಳಿಸಿದ್ದಾರೆ.