ಕುಶಾಲನಗರ, ಸೆ. 13: ಕುಶಾಲನಗರ ನಾಡಪ್ರಭು ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಈ ತಿಂಗಳ ತಾ. 15 ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಸಂಘವು 2018-19ನೇ ಸಾಲಿನಲ್ಲಿ ರೂ. 9 ಕೋಟಿ ವಹಿವಾಟು ನಡೆಸಿದ್ದು 9 ಲಕ್ಷದ 76 ಸಾವಿರ ನಿವ್ವಳ ಲಾಭ ಗಳಿಸಿದೆ ಎಂದು ಮಾಹಿತಿ ನೀಡಿದರು.
ಸದಸ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ಜಾಮೀನು ಸಾಲ, ಆಭರಣ ಸಾಲ ನೀಡಲಾಗುತ್ತಿದ್ದು ಸದಸ್ಯರ ಕುಟುಂಬ ವರ್ಗವನ್ನು ಸರಕಾರಿ ಯಶಸ್ವಿನಿ ವಿಮಾ ಯೋಜನೆಗೆ ಅಳವಡಿಸಿಕೊಳ್ಳಲು ಚಿಂತನೆ ಹರಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎಚ್.ಎನ್.ರಾಮಚಂದ್ರ, ನಿರ್ದೇಶಕರಾದ ಬಿ.ಎ. ನಾಗೇಗೌಡ, ಜಿ.ಬಿ. ಜಗದೀಶ್, ಕಸ್ತೂರಿ ಮಹೇಶ್ ಇದ್ದರು.