ಮಡಿಕೇರಿ, ಸೆ.13: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಮಡಿಕೇರಿ ವಿಭಾಗಕ್ಕೆ ಸೇರಿದ ಉಪ ವಿಭಾಗಗಳಾದ ಮಡಿಕೇರಿ, ಕುಶಾಲನಗರ, ಸೋಮವಾರಪೇಟೆ, ಗೋಣಿಕೊಪ್ಪಲು ಹಾಗೂ ವೀರಾಜಪೇಟೆ ವ್ಯಾಪ್ತಿಯಲ್ಲಿರುವ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಹಾಗೂ ಎಲ್.ಟಿ(4)ಎ ನೀರಾವರಿ ಪಂಪ್‍ಸೆಟ್‍ಗಳ ವಿದ್ಯುತ್ ಸಂಪರ್ಕ ಹೊಂದಿರುವ ಎಸ್‍ಸಿ, ಎಸ್‍ಟಿ ಗ್ರಾಹಕರು ಜಾತಿ ಪ್ರಮಾಣ ಪತ್ರದ ಆರ್.ಡಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ, ಸ್ಥಿರ ಮೊಬೈಲ್ ಸಂಖ್ಯೆ, ರಶೀದಿಯನ್ನು ತಮ್ಮ ಗ್ರಾಮ ವ್ಯಾಪ್ತಿಗೆ ಸಂಬಂಧಿಸಿದ ಶಾಖಾಧಿಕಾರಿಗಳ ಕಚೇರಿ/ ಸೆಸ್ಕ್ ಉಪ ವಿಭಾಗ ಕಚೇರಿಗೆ ಅಗತ್ಯ ದಾಖಲೆಯೊಂದಿಗೆ ಮಾಹಿತಿಗಳನ್ನು ಸಲ್ಲಿಸುವಂತೆ ಮಡಿಕೇರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಸೋಮಶೇಖರ್ ಅವರು ತಿಳಿಸಿದ್ದಾರೆ.