ಕೂಡಿಗೆ, ಸೆ. 11: ಹೆಬ್ಬಾಲೆ ಗ್ರಾಮ ಪಂಚಾಯತಿಯಲ್ಲಿ ಗ್ರಾಮಸ್ದರಿಗೆ ಅನುಕೂಲವಾಗುವಂತೆ ರುದ್ರಭೂಮಿ, ಹಾಗೂ ಕಸ ವಿಲೇವಾರಿ ಜಾಗದ ಸರ್ವೆ ಕಾರ್ಯ ನಡೆಯಿತು. ಈಗಾಗಲೇ ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯಲ್ಲಿ ಅನೇಕ ಬಾರಿ ಜಾಗದ ಬಗ್ಗೆ ಚರ್ಚೆ ನಡೆದಿತ್ತು. ಅದರಂತೆ ಮೂರು ಜಾಗಗಳ ಸರ್ವೆ ನಂಬರ್ 17/2, 28/7,28/1ಗಳ ಪ್ರದೇಶದಲ್ಲಿ ಸರ್ವೆ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ, ಅಭಿವೃದ್ಧಿ ಅಧಿಕಾರಿ ರಾಕೇಶ್ ಸೇರಿದಂತೆ ತಾಲೂಕು ಮಟ್ಟದ ಸರ್ವೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.