ಮಡಿಕೇರಿ, ಸೆ. 12: ಪೆÇಲೀಸ್ ಇಲಾಖೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕೊಡಗಿನ ಯುವಕ-ಯುವತಿಯರು ಸೇರ್ಪಡೆಗೊಳ್ಳಲಿ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪನ್ನೇಕರ್ ಕರೆ ನೀಡಿದ್ದಾರೆ.

ಮಡಿಕೇರಿಯ ಎಲ್‍ಐಸಿ ವತಿಯಿಂದ ಆಯೋಜಿತ ಎಲ್‍ಐಸಿಯ 63ನೇ ವಿಮಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಡಾ. ಸುಮನ್ ಪನ್ನೇಕರ್, ಕೊಡಗು ಜಿಲ್ಲೆಯಲ್ಲಿ ಸೇನಾಪಡೆಗಳಿಗೆ ಹೆಚ್ಚಿನ ಯುವ ಜನರು ಸೇರ್ಪಡೆಗೊಳ್ಳುತ್ತಿರುವದು ಸಂತೋಷದ ವಿಚಾರ. ಇದೇ ರೀತಿ ಪೆÇಲೀಸ್ ಇಲಾಖೆಯಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗವಕಾಶಗಳಿದ್ದು, ಕೊಡಗಿನ ಯುವಕರು ಪೆÇಲೀಸ್ ಪಡೆಗೆ ಸೇರಲು ಉತ್ಸುಕತೆ ತೋರುತ್ತಿಲ್ಲ ಎಂದು ವಿಷಾದಿಸಿದರು.

ಮುಂದಿನ ದಿನಗಳಲ್ಲಿ ಕೊಡಗಿನ ಯುವಕ-ಯುವತಿಯರು ಪೆÇಲೀಸ್ ಇಲಾಖೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗಲಿ ಎಂದು ಆಶಿಸಿದರು. ಎಲ್‍ಐಸಿಯ ಶಾಖಾ ವ್ಯವಸ್ಥಾಪಕ ಅರುಳ್ ಸೆಲ್ವಿ ಕುಚೇಲನ್ ಮಾತನಾಡಿ, ಗ್ರಾಹಕರ ನಿರಂತರ ಬೆಂಬಲ, ಪೆÇ್ರೀತ್ಸಾಹದಿಂದಾಗಿಯೇ ಎಲ್‍ಐಸಿ ಭ್ರಷ್ಟಾಚಾರ ಮುಕ್ತ ಸಂಸ್ಥೆಯಾಗಿ ಹೆಸರುವಾಸಿಯಾಗಿದೆ ಎಂದು ಹೇಳಿದರು.

ಜೀವ ವಿಮಾ ನಿಗಮದ ಅಧಿಕಾರಿ ಶಶಿಧರ್ ಎಲವಟ್ಟಿ ಎಲ್‍ಐಸಿ ಸಾಗಿ ಬಂದ ಹಾದಿಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಛದ್ಮವೇಷ ಸ್ಪರ್ಧೆ ಆಯೋಜಿಸಲಾಗಿತ್ತು. ಎಲ್‍ಐಸಿಯ ಮಹಿಳಾ ಪ್ರತಿನಿಧಿಗಳ ಯಶಸ್ವಿನಿ ತಂಡದಿಂದ ಕೊಡವ ಸಾಂಪ್ರದಾಯಿಕ ನೃತ್ಯ ಪ್ರದರ್ಶನ ನಡೆಯಿತು.