ಸುಂಟಿಕೊಪ್ಪ, ಸೆ. 12: ಸುಂಟಿಕೊಪ್ಪ ನಾಡ ಕಚೇರಿ ಆವರಣ ಸುತ್ತ ಮುತ್ತಲು ಗಿಡಗಂಟಿಗಳು ಕುರುಚಲು ಗಿಡಗಳು ಬೆಳೆದು ನಿಂತಿದ್ದನ್ನು ಸಮಾಜ ಸೇವಕ ಚೆಟ್ಟಳ್ಳಿ ಕೊಳಂಬೆಕಾಡು ಎಸ್ಟೇಟ್ ಮಾಲೀಕ ಕಂಬಿರಂಡ ನಿತಿನ್ ಗಣಪತಿ ಅವರು ಕಾರ್ಮಿಕರನ್ನು ಬಿಟ್ಟು ಕಡಿದು ಶುಚಿಗೊಳಿಸಿ ಹೂವು, ಗಿಡ, ನೆರಳು ಗಿಡಗಳನ್ನು ನೆಟ್ಟು ಸ್ವಚ್ಛ ಭಾರತ ಅಭಿಯಾನಕ್ಕೆ ಸಾಥ್ ನೀಡಿದರು.
ಮಡಿಕೇರಿಯ ಸನ್‍ಶೈನ್ ಖಾಸಗಿ ಗ್ರಂಥಾಲಯವನ್ನು ಸಾರ್ವಜನಿಕ ಉಪಯೋಗಕ್ಕೆ ನೀಡುತ್ತಿರುವ ನಿತಿನ್ ಅವರು ಸಮಾಜಕ್ಕೆ ತನ್ನಿಂದ ಆಗುವ ಸಹಾಯವನ್ನು ಮಾಡಬೇಕು ಎಂಬ ಅಭಿಲಾಷೆಯಿಂದ ಸುಂಟಿಕೊಪ್ಪ ನಾಡ ಕಚೇರಿಯ (ಪ್ರಭಾರ) ಉಪ ತಹಶೀಲ್ದಾರ್ ಶಿವಪ್ಪ ಅವರ ಕೋರಿಕೆ ಮೇರೆಗೆ ಸ್ವಚ್ಛತಾ ಕಾರ್ಯನಿರ್ವಹಿಸಿದರು.