ಸುಂಟಿಕೊಪ್ಪ: ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿಯ ವತಿಯಿಂದ 55ನೇ ವರ್ಷದ ಗೌರಿ ಗಣೇಶೋತ್ಸವದ ಅಂಗವಾಗಿ ಕೊದಂಡ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಮೂರ್ತಿಯನ್ನು ವಿದ್ಯುತ್ ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ವಿಸರ್ಜಿಸಲಾಯಿತು.
ವಿಶ್ವ ಹಿಂದೂ ಪರಿಷತ್ ಹಾಗೂ ಗೌರಿ ಗಣೇಶ ಆಚರಣಾ ಸಮಿತಿಯ ಅಧ್ಯಕ್ಷ ಬಿ.ಎಂ. ಸುರೇಶ್, ಉಪಾಧ್ಯಕ್ಷರುಗಳಾದ ಡಿ.ಎಂ. ಲಕ್ಷ್ಮಣ, ಎಸ್. ರವಿ, ಎಂ.ಆರ್. ಶಶಿಕುಮಾರ್, ಪಿ. ಲೋಕೇಶ್, ಡಿ.ಕೆ. ರಜನೀಶ್, ಪ್ರಧಾನ ಕಾರ್ಯದರ್ಶಿ ಸುರೇಶ್‍ಗೋಪಿ, ಖಜಾಂಚಿ ಶೇಖರ್ ಇದ್ದರು.
ವೀರಾಜಪೇಟೆ: ಶ್ರೀ ವಿದ್ಯಾ ವಿನಾಯಕ ಸೇವಾ ಸಮಿತಿಯ 24ನೇ ವರ್ಷದ ಗಣೇಶೋತ್ಸವದ ಉತ್ಸವ ಮೂರ್ತಿಯನ್ನು ಹೂವಿನ ಮಂಟಪದಲ್ಲಿ ಕುಳ್ಳಿರಿಸಿ ಬಾಳುಗೊಡು ಚಾಮುಂಡಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕೇರಳ ರಸ್ತೆಯಲ್ಲಿರುವ ಪೆರಂಬಾಡಿ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.
ಕೂಡಿಗೆ: ಕೂಡಿಗೆ ಡೈರಿ ನೌಕರರು ತಮ್ಮ ಅವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿಯನ್ನು ವಿಸರ್ಜಿಸಿದರು. ಈ ಸಂದರ್ಭ ಡೈರಿ ವ್ಯವಸ್ಥಾಪಕ ನಂದೀಶ್ ಸೇರಿದಂತೆ ಪ್ರಮುಖರು ಹಾಜರಿದ್ದರು. ಕೂಡಿಗೆ ಕೂಪ್ಪಲು, ಕೋಟೆ, ಕೂಡುಮಂಗಳೂರು ಮಲೇನಹಳ್ಳಿ ಭಾಗಗಳಲ್ಲಿ ಕಾವೇರಿ-ಹಾರಂಗಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.ಆಲೂರು-ಸಿದ್ದಾಪುರ: ಸಮೀಪದ ಕಣಿವೆಬಸವನಹಳ್ಳಿ ಗ್ರಾಮದ ಗೌರಿ-ಗಣೇಶ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಿದ್ದ ಗೌರಿ-ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು. ಗ್ರಾಮದ ಸಾರ್ವಜನಿಕ ಸಮುದಾಯ ಭವನದಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ-ಗಣೇಶ ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಕಣಿವೆಬಸವನಹಳ್ಳಿ ಗ್ರಾಮದ ಕೆರೆಯೊಂದರಲ್ಲಿ ವಿಸರ್ಜನೆ ಮಾಡಲಾಯಿತು.