ಮಡಿಕೇರಿ, ಸೆ. 12: ಪ್ರವಾಸಿ ತಾಣ ದುಬಾರೆಯಲ್ಲಿ ಜಂಗಲ್ ಲಾಡ್ಜ್ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಜಂಗಲ್ ಲಾಡ್ಜ್ ನಿರ್ಮಾಣ ಸ್ಥಗಿತಗೊಳಿಸುವಂತೆ ಕೋರಿದ್ದ ಪಿಐಎಲ್ ಬಗ್ಗೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಸಲಾಗಿದೆ. ರಾಜ್ಯ ಸರ್ಕಾರ, ಕೆಎಸ್‍ಟಿಡಿಸಿ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಸರ್ಕಾರದ ನಿಲುವು ಖಾಸಗಿ ಸಂಸ್ಥೆಗಳ ಪÀರ ಆಗಿರಬಾರದು, ಪರಿಸರ ಪ್ರವಾಸೋದ್ಯಮಕ್ಕೆ ಕಾನೂನಿನಲ್ಲಿ ಅವಕಾಶ ಇರಬಹುದು. ಆದರೆ ಕಾನೂನು ಉಲ್ಲಂಘನೆ ಸಹಿಸುವದಿಲ್ಲವೆಂದು ಹೈಕೋರ್ಟ್ ಹೇಳಿದೆ. ಲಾಡ್ಜ್ ನಿರ್ಮಾಣಕ್ಕೂ ಮುನ್ನ ಪರಿಸರ ಸಂಬಂಧಿ ಅನುಮತಿ ಪಡೆದುಕೊಳ್ಳಬೇಕೆಂದು ರಾಜ್ಯ ಸರ್ಕಾರ ಮತ್ತು ನಿಗಮಕ್ಕೆ ತಾಕೀತು ಮಾಡಿದೆ. ಈ ಬಗೆಗಿನ ವಿಚಾರಣೆಯನ್ನು ಅಕ್ಟೋಬರ್ ತಾ. 23ಕ್ಕೆ ಮುಂದೂಡಿದೆ.