ಮಡಿಕೇರಿ, ಸೆ. 12: ಇಂಡಿಯನ್ ಆಯಿಲ್ ಕಾರ್ಪೋರೇಷನ್ ವತಿಯಿಂದ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಹಾಗೂ ಹಿಂದಿನ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರುಗಳ ಪ್ರಯತ್ನದೊಂದಿಗೆ ಕೊಡಗು ಜಿಲ್ಲೆಗೆ ಎರಡು ಆ್ಯಂಬುಲೆನ್ಸ್‍ಗಳನ್ನು ಕಲ್ಪಿಸಿಕೊಡಲಾಗಿದೆ.ಪೆಟ್ರೋಲ್ ಬಂಕ್ ಮಾಲೀಕರು ಆಗಿರುವ ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರಿಗೆ, ಕಳೆದ ಮಳೆಗಾಲದಲ್ಲಿ ಅಂದಿನ ಜಿಲ್ಲಾಧಿಕಾರಿ ಸಮಾಲೋಚಿಸಿ; ಇಂಡಿಯನ್ ಆಯಿಲ್ ಕಾರ್ಪೋರೇಷನ್‍ನಿಂದ ತುರ್ತು ಸೇವೆಗಾಗಿ ಆ್ಯಂಬುಲೆನ್ಸ್ ಕಲ್ಪಿಸಲು ಕೋರುವಂತೆ ಸಲಹೆ ನೀಡಿದ್ದು; ಆ ಮೇರೆಗೆ ಇದೀಗ ಎರಡು ಆ್ಯಂಬುಲೆನ್ಸ್‍ಗಳು ಲಭಿಸಿವೆ. ಈ ಆ್ಯಂಬುಲೆನ್ಸ್‍ಗಳಲ್ಲಿ ಒಂದು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಹಾಗೂ ಮತ್ತೊಂದನ್ನು ಇತರೆಡೆ ಸೇವೆಗೆ ಕಲ್ಪಿಸಲು ಕ್ರಮಕೈಗೊಳ್ಳಲಾಗುವದು ಎಂದು ಸುನಿಲ್ ಸುಬ್ರಮಣಿ ತಿಳಿಸಿದ್ದಾರೆ.