*ಗೋಣಿಕೊಪ್ಪಲು: ಅರುವತ್ತೊಕ್ಲು ಗ್ರಾ.ಪಂ. ವ್ಯಾಪ್ತಿಯ ಸೀತಾ ಕಾಲೋನಿಯ 40ಕ್ಕೂ ಹೆಚ್ಚು ಗುಡಿಸಲು ನಿವಾಸಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಪರಿಹಾರ ಚೆÀಕ್ ವಿತರಿಸಿದರು.
ಪೆÇನ್ನಂಪೇಟೆ ತಾಲೂಕು ಪಂಚಾಯಿತಿ ಸಾಮಥ್ರ್ಯ ಸೌಧ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿ ಕುಟುಂಬಗಳಿಗೆ ತಲಾ 4,100 ರಂತೆ 1 ಲಕ್ಷದ 64 ಸಾವಿರ ರೂಪಾಯಿಗಳ ಚೆಕ್ಕ್ ಅನ್ನು ನೀಡಲಾಯಿತು. ಈ ಸಂದರ್ಭ ಕಂದಾಯ ಇಲಾಖೆಯ ಅಧಿಕಾರಿಗಳು, ಆರ್.ಎಂ.ಸಿ. ಅಧ್ಯಕ್ಷ ಆದೇಂಗಡ ವಿನುಚಂಗಪ್ಪ, ಪೆÇನ್ನಂಪೇಟೆ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಪದ್ಯಂಡ ಹರೀಶ್ ಸೇರಿದಂತೆ ಹಲವರು ಹಾಜರಿದ್ದರು.ಕುಶಾಲನಗರ: ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನೆರೆ ಸಂತ್ರಸ್ತರಿಗೆ ಪಂಚಾಯಿತಿ ಮೂಲಕ ಆಹಾರ ಸಾಮಗ್ರಿಗಳನ್ನು ಒಳಗೊಂಡ ಕಿಟ್ ವಿತರಣೆ ಮಾಡಲಾಯಿತು. ಸ್ಥಳೀಯ ಎಪಿಎಂಸಿ ಗೋದಾಮು ಆವರಣದಲ್ಲಿ ಪ.ಪಂ. ಮುಖ್ಯಾಧಿಕಾರಿ ಸುಜಯ್‍ಕುಮಾರ್ ಸಂತ್ರಸ್ತರಿಗೆ ಕಿಟ್ ವಿತರಣೆ ಮಾಡಿದರು.
ಎರಡನೇ ಹಂತದಲ್ಲಿ ಈ ವ್ಯಾಪ್ತಿಯ 400 ಮಂದಿ ಸಂತ್ರಸ್ತರಿಗೆ ಕಿಟ್ ವಿತರಣೆ ಮಾಡಲಾಗುತ್ತಿದೆ. ಮನೆಗಳ ಹಾನಿ ಉಂಟಾದ ಸಂತ್ರಸ್ತರಿಗೆ ಶೀಘ್ರದಲ್ಲೇ ಚೆಕ್ ವಿತರಣೆ ಮಾಡಲಾಗುವದು ಎಂದು ತಿಳಿಸಿದರು. ಪಪಂ ಸದಸ್ಯ ಪ್ರಮೋದ್ ಮುತ್ತಪ್ಪ, ಅಭಿಯಂತರೆ ಶ್ರೀದೇವಿ, ಆರೋಗ್ಯ ನಿರೀಕ್ಷಕ ಉದಯ್, ಸತೀಶ್ ಇದ್ದರು.ಸೋಮವಾರಪೇಟೆ: ಪ್ರಸಕ್ತ ವರ್ಷದ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದ ತಾಲೂಕಿನ 5 ಹೋಬಳಿ ವ್ಯಾಪ್ತಿಯ ಸಂತ್ರಸ್ತರಿಗೆ ಸರ್ಕಾರದಿಂದ ನೀಡಲಾಗುವ ಪರಿಹಾರ ಧನದ ಚೆಕ್‍ಗಳನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಸಂತ್ರಸ್ತರಿಗೆ ವಿತರಿಸಿದರು.
ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರೂ. 2.4 ಕೋಟಿ ಪರಿಹಾರದ ಹಣವನ್ನು ಚೆಕ್ ಮೂಲಕ ವಿತರಿಸಲಾಯಿತು.
ತಾಲೂಕಿನ ಸುಂಟಿಕೊಪ್ಪ, ಸೋಮವಾರಪೇಟೆ, ಶಾಂತಳ್ಳಿ, ಶನಿವಾರಸಂತೆ, ಕೊಡ್ಲಿಪೇಟೆ ಹೋಬಳಿಗಳ 1,519 ಮಂದಿ ಸಂತ್ರಸ್ತರಿಗೆ ತಲಾ ಹತ್ತು ಸಾವಿರದಂತೆ ಒಟ್ಟು 1,51,90,000 ರೂ. ಹಾಗೂ ಶೇ. 15 ರಿಂದ 25 ರಷ್ಟು ಮನೆ ಹಾನಿಯಾಗಿರುವ 351 ಮಂದಿಗೆ ತಲಾ 25 ಸಾವಿರದಂತೆ ಒಟ್ಟು 87,50,000 ರೂ.ಗಳ ಚೆಕ್‍ಗಳನ್ನು ಶಾಸಕರು ವಿತರಿಸಿದರು.
ಈ ಸಂದರ್ಭ ಮಾತನಾಡಿದ ರಂಜನ್, ಕೊಡಗಿನ ಸಂಕಷ್ಟಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಕ್ಷಣ ಸ್ಪಂದಿಸಿ 536 ಕೋಟಿ ಹಣ ಒದಗಿಸುವದಾಗಿ ಘೋಷಿಸಿದ್ದು, ಈಗಾಗಲೇ ರೂ. 100 ಕೋಟಿ ಹಣ ಬಿಡುಗಡೆಗೊಳಿಸಿದ್ದಾರೆ ಎಂದರು.
ಜಿಲ್ಲೆಯ ಹೊಳೆ ಬದಿಗಳಲ್ಲಿ ಮನೆ ನಿರ್ಮಾಣ ಮಾಡುವದನ್ನು ನಿರ್ಬಂಧಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವದು. ಹೊಳೆ ಬದಿಯಲ್ಲಿ ಮನೆ ಕಳೆದುಕೊಂಡು ನಿರಾಶ್ರಿತರಾದ ಕುಟುಂಬಗಳಿಗೆ 30/40 ಅಳತೆಯ ನಿವೇಶನ ಹಾಗೂ ಮನೆ ನಿರ್ಮಾಣಕ್ಕಾಗಿ ರೂ. 5 ಲಕ್ಷಗಳನ್ನು ನೀಡಲಾಗುತ್ತದೆ ಎಂದು ರಂಜನ್ ತಿಳಿಸಿದರು.
ಪೈಸಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡಿರುವ ಪ್ರಕರಣಗಳನ್ನು ಗುರುತಿಸಿ, ಒತ್ತುವರಿ ತೆರವುಗೊಳಿಸಿ, ನಿರಾಶ್ರಿತರಿಗೆ ನಿವೇಶನ ನೀಡಲು ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಪರಿಸ್ಥಿತಿಯನ್ನು ಜಿಲ್ಲಾಡಳಿತ ಸಮರ್ಪಕವಾಗಿ ನಿಭಾಯಿಸಿದ್ದು, ಅಗತ್ಯ ತುರ್ತು ಕ್ರಮ ಕೈಗೊಂಡು ನಿರಾಶ್ರಿತರಿಗೆ ರಕ್ಷಣೆ ಒದಗಿಸಲಾಗಿದೆ ಎಂದರು.
ಈ ಸಂದರ್ಭ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ತಹಶೀಲ್ದಾರ್ ಗೋವಿಂದರಾಜು, ಪ.ಪಂ. ಮುಖ್ಯಾಧಿಕಾರಿ ನಟರಾಜ್, ಕಂದಾಯ ನಿರೀಕ್ಷಕರುಗಳಾದ ಹೆಚ್.ಕೆ. ಶಿವಪ್ಪ, ಸಿ.ಪಿ. ಗಣೇಶ್, ನಂದಕುಮಾರ್, ಮನುಕುಮಾರ್ ಹಾಗೂ ಬಿ.ಎನ್. ವಿನು ಸೇರಿದಂತೆ ಇತರರು ಹಾಜರಿದ್ದರು.ಚೆಟ್ಟಳ್ಳಿ: ನಮ್ಮ ಕೊಡಗು ತಂಡದ ಅಧ್ಯಕ್ಷ ನೌಷಾದ್ ಜನ್ನತ್, ಬೆಂಗಳೂರು ಸಂಘಟನೆಗಳ ಪ್ರಮುಖರಾದ ಜೈ ಕಿರಣ್, ಉದಯ್, ಚಂದನ್, ಸೀಮಾ, ಕಿರಣ್ ಮಾಯಿ, ಅಜಿತ್, ಉಮೇಶ್, ರೋಷನ್, ಲೋಹಿತ್, ಬಶೀರ್, ರೆಜಿತ್ ಕುಮಾರ್, ಗಿರೀಶ್ ಜಾಸ್ನ, ಕೃಷ್ಣ ಮುಂತಾದವರು ಭಾಗವಹಿಸಿದ್ದರು.
ನಮ್ಮ ಕೊಡಗು ತಂಡದ ನೇತೃತ್ವದಲ್ಲಿ ಬೆಂಗಳೂರಿನ ಬನವಾಸಿ ಕನ್ನಡಿಗರು ಮತ್ತು ಉದಯ್ ನೇತೃತ್ವದ ವೇ ಫಾರ್ ಲೈಫ್, ಹಾಗೂ ಜಯಂತಿ ಗ್ರೂಪಿನ ವತಿಯಿಂದ ರೂ. 5 ಲಕ್ಷ ಮೌಲ್ಯದ ಸಾಮಗ್ರಿಗಳ 400 ಕಿಟ್‍ಗಳನ್ನು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಹ್ಯ, ಕಕ್ಕಟ್ಟುಕಾಡು, ಕೂಡುಗದ್ದೆ, ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬರಗುಂಡಿ, ಬೆಟ್ಟದಕಾಡು ಪ್ರವಾಹ ಪೀಡಿತ ಪ್ರದೇಶಗಳ ಕುಟುಂಬಗಳಿಗೆ ವಿತರಣೆ ಮಾಡಲಾಯಿತು.