ಸಂಪಾಜೆ, ಸೆ. 10: ಇಲ್ಲಿನ ಶ್ರೀ ದೇವತಾರಾಧನ ಸಮಿತಿ ಶ್ರೀ ಗೌರಿ ಗಣೇಶೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಪುರುಷರ ಕೆಸರುಗದ್ದೆ ಹಗ್ಗಜಗ್ಗಾಟದ ವೀಕ್ಷಣೆ ಸಂದರ್ಭದಲ್ಲಿ ಕೆಸರುಗದ್ದೆಯ ಹತ್ತಿರ ಇದ್ದ 40 ಅಡಿ ಎತ್ತರದ ತೆಂಗಿನಮರದಿಂದ ತೆಂಗಿನಕಾಯಿ ತಲೆಗೆ ಬಿದ್ದು ಅಸ್ವಸ್ಥಗೊಂಡ ಕೃಷ್ಣ ಅರಮನೆತೋಟ ಇವರಿಗೆ ಸಂಪಾಜೆ ಹಿಂದೂ ಯುವ ಮಿತ್ರ ಬಳಗ ಮತ್ತು ಸಂಪಾಜೆ ಶ್ರೀ ದೇವತಾರಾಧನ ಸಮಿತಿ ವತಿಯಿಂದ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಹಣವನ್ನು ಸಂಗ್ರಹಣೆ ಮಾಡಿ ಶ್ರೀ ಶ್ರೀಧರ್ ಪಡ್ಪು, ಕಾರ್ಯದರ್ಶಿ ದೇವತಾರಾಧನ ಸಮಿತಿ ಇವರು ಹಸ್ತಾಂತರಿಸಿದರು.