ಅಮ್ಮತ್ತಿ, ಸೆ. 10: ಇಶಲ್ ಮರ್ಹಬ ಆನ್‍ಲೈನ್ ಗಾಯನ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ವೀರಾಜಪೇಟೆಯ ಡಿ.ಹೆಚ್.ಎಸ್. ಎಂಕ್ಲೇವ್‍ನ ಎನ್.ಸಿ.ಟಿ. ಟೂರ್ಸ್-ಟ್ರಾವೆಲ್ಸ್ ಕಚೇರಿಯ ಸಭಾಂಗಣದಲ್ಲಿ ನಡೆಯಿತು.
ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಸ್ಪರ್ಧೆಯನ್ನು ನಡೆಸಲಾಗಿತ್ತು. ಜಿಲ್ಲೆಯ ಜನರು ಪ್ರವಾಹ ಪರಿಸ್ಥಿತಿ ಎದುರಿ ಸುತಿದ್ದರಿಂದ ಕಾರ್ಯ ಕ್ರಮವನ್ನು ಮುಂದೂಡಲಾಗಿತ್ತು.
ಕಾರ್ಯಕ್ರಮದ ಅದ್ಯಕ್ಷತೆ ಯನ್ನು ಕೆ.ಡಿ.ಎಸ್ ಸಮಿತಿ ಅಧ್ಯಕ್ಷ ಮಜೀದ್ ಚೋಕಂಡಳ್ಳಿ ವಹಿಸಿದ್ದರು. ಸೀನಿಯರ್ ವಿಭಾಗದ ಸ್ಪರ್ಧೆಯಲ್ಲಿ ಎಮ್ಮೆಮಾಡುವಿನ ಇಶಾಕ್ ಪ್ರಥಮ, ಕಡಂಗದ ಇಶಾಕ್ ದ್ವಿತೀಯ ಹಾಗೂ ಮಡಿಕೇರಿಯ ಯೂಸುಫ್ ತೃತೀಯ ಸ್ಥಾನ ಪಡೆದಿದ್ದರು.
ಜೂನಿಯರ್ ವಿಭಾಗದ ಸ್ಪರ್ಧೆಯಲ್ಲಿ ಅನಸ್ ಬೆಂಗಳೂರು ಪ್ರಥಮ, ಆಶಿಕ್ ಚೋಕಂಡಳ್ಳಿ ದ್ವಿತೀಯ ಹಾಗೂ ಆರಿಫ್ ಎಮ್ಮೆಮಾಡು ತೃತೀಯ ಸ್ಥಾನ ಪಡೆದಿದ್ದರು. ರಫೀಕ್ ಗುಂಡಿಕೆರೆ ಸ್ವಾಗತಿಸಿ, ಅಬ್ಬಾಸ್ ಜೈನಿ ವಂದಿಸಿದರು.