ಕುಶಾಲನಗರ, ಸೆ. 10: ಅಪಘಾತದಲ್ಲಿ ಗಾಯಗೊಂಡಿರುವ ವಿದ್ಯಾರ್ಥಿನಿ ಕುಟುಂಬಕ್ಕೆ ಕುಶಾಲನಗರ ರೋಟರಿ ರೂ. 25 ಸಾವಿರದ ಆರ್ಥಿಕ ಸಹಕಾರ ಒದಗಿಸಿದೆ.
ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ಕಾಲು ಮುರಿತಕ್ಕೊಳಗಾದ ಸ್ಥಳೀಯ ಫಾತಿಮ ಕಾನ್ವೆಂಟ್ ವಿದ್ಯಾರ್ಥಿನಿ ಏಕತಾ ರಾಘವೇಂದ್ರ 3ನೇ ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಕಾರಣ; ರೋಟರಿ ವತಿಯಿಂದ ಗಾಯಾಳು ವಿದ್ಯಾರ್ಥಿನಿ ತಂದೆ ರಾಘವೇಂದ್ರ ಅವರಿಗೆ ಚೆಕ್ ಹಸ್ತಾಂತರಿಸಿದರು.
ಅಧ್ಯಕ್ಷ ಎಂ.ಡಿ.ಅಶೋಕ್, ಕಾರ್ಯದರ್ಶಿ ಸಂಜು ಬೆಳ್ಳಿಯಪ್ಪ, ಪ್ರಮುಖರಾದ ಎಸ್.ಕೆ.ಸತೀಶ್, ಕೆ.ಪಿ.ಚಂದ್ರಶೇಖರ್, ಎನ್.ಜಿ.ಪ್ರಕಾಶ್, ಪ್ರೇಮ್‍ಚಂದ್ರನ್ ಇದ್ದರು.