ಕೂಡಿಗೆ, ಸೆ. 10: ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಸೋಮವಾರಪೇಟೆ ತಾಲೂಕು ಮಟ್ಟದ ಖೋ-ಖೋ ಮತ್ತು ಥ್ರೋಬಾಲ್ ಕ್ರೀಡಾಕೂಟ ಶಿರಂಗಾಲ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು. ಉದ್ಘಾಟನೆಯನ್ನು ಪ್ರಾಂಶುಪಾಲರ ಸಂಘದ ಕಾರ್ಯ ದರ್ಶಿ ಸಿ.ಎಂ. ಮಹಾಲಿಂಗಯ್ಯ ನೆರವೇರಿಸಿ ಎಲ್ಲವನ್ನೂ ಕ್ರೀಡಾ ಸ್ಫೂರ್ತಿಯಲ್ಲಿ ತೆಗೆದುಕೊಂಡು ಹೋಗಬೇಕೆಂದು ಸಲಹೆ ನೀಡಿದರು.

ಪ್ರಾಂಶುಪಾಲ ಹಂಡ್ರಂಗಿ ನಾಗರಾಜ್ ಮಾತನಾಡಿ, ಸ್ಪರ್ಧಾ ಮನೋಭಾವವನ್ನು ರೂಢಿಸಿಕೊಳ್ಳಿ. ಮುಂದಿನ ಜೀವನದಲ್ಲಿ ನಿಮಗೆ ಅದು ಸಹಕಾರಿಯಾಗುತ್ತದೆ ಎಂದರು. ಅಧ್ಯಕ್ಷತೆಯನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎನ್.ಬಿ. ಮಹೇಶ್ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಎಸ್. ರಮೇಶ, ತಾಲೂಕು ಪಂಚಾಯಿತಿ ಸದಸ್ಯ ಎನ್.ಎಸ್. ಜಯಣ್ಣ, ಶಿರಂಗಾಲ ಸಹಕಾರ ಸಂಘದ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಸ್.ಎಸ್. ಕೃಷ್ಣ, ಸಿ.ಎನ್. ಲೋಕೇಶ್, ಧನೇಂದ್ರ ಕುಮಾರ್, ಎನ್. ಶ್ರೀಧರ್, ಮುಖ್ಯ ಶಿಕ್ಷಕ ಸೋಮಯ್ಯ, ವೆಂಕಟೇಶ್, ದೈಹಿಕ ಶಿಕ್ಷಕಿ ಸೌಮ್ಯ ಮೊದಲಾದವರು ಇದ್ದರು. ಉಪನ್ಯಾಸಕಿ ಭವಾನಿ ಸ್ವಾಗತಿಸಿ, ಕೆ.ಎನ್. ಪಲ್ಲವಿ ವಂದಿಸಿದರು. ಹೆಚ್.ಆರ್. ಶಿವಕುಮಾರ್ ನಿರೂಪಿಸಿದರು.