ವೀರಾಜಪೇಟೆ, ಸೆ. 10: ವೀರಾಜಪೇಟೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಹಾಗೂ ಕುಂದು ಕೊರತೆಗಳ ಸಭೆ ನಡೆಸಿದರು.
ವೀರಾಜಪೇಟೆ ಪ.ಪಂ. ಸಭಾಂಗಣದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಎನ್.ಎಂ. ಪೂಣಚ್ಚ ಅವರು ಸಾರ್ವಜನಿಕರ ಕುಂದು ಕೊರತೆಗಳ ಕುರಿತು ವಿಚಾರಣೆ ನಡೆಸಿದರು. ಇದೇ ಸಂದರ್ಭ ರೆವಿನ್ಯೂ ಇಲಾಖೆಯ ವಿರುದ್ಧ 5, ಸರ್ವೆ ಇಲಾಖೆ-1 ಹಾಗೂ ಪಟ್ಟಣ ಪಂಚಾಯಿತಿ ವಿರುದ್ಧ 2 ಸೇರಿದಂತೆ ಒಟ್ಟು 8 ದೂರುಗಳನ್ನು ಸಾರ್ವಜನಿಕರು ಲೋಕಾಯುಕ್ತ ಅಧಿಕಾರಿಗಳಿಗೆ ಸಲ್ಲಿಸಿ ವಿಚಾರಣೆಗಾಗಿ ನೋಂದಾಯಿಸಿದರು.
ಲೋಕಾಯುಕ್ತ ಅಧಿಕಾರಿಗ ಳೊಂದಿಗೆ ತಾಲೂಕು ಕಚೇರಿಯ ಶಿರಸ್ತೆದಾರ್ ಹೆಚ್.ಕೆ. ಪೊನ್ನು ಹಾಗೂ ಲೋಕಾಯುಕ್ತ ಸಿಬ್ಬಂದಿಗಳು ಹಾಜರಿದ್ದರು.