ಪೆರಾಜೆ, ಸೆ. 10: ಇಲ್ಲಿಯ ಚಿಗುರು ಯುವಕಮಂಡಲದ 2019-20ನೇ ಸಾಲಿನ ಅಧ್ಯಕ್ಷರಾಗಿ ಶೀತಲ್ ಕುಂಬಳಚೇರಿ ಹಾಗೂ ಕಾರ್ಯದರ್ಶಿಯಾಗಿ ನಿಶಾಂತ್ ಮಜಿಕೋಡಿ ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಅನಿಲ್ ಕುಂಬಳಚೇರಿ, ಉಪಾಧ್ಯಕ್ಷರಾಗಿ ಭುವನ್ ಕುಂಬಳಚೇರಿ, ಖಜಾಂಚಿಯಾಗಿ ರಜತ್(ಹರ್ಷಿತ್) ಮಜಿಕೋಡಿ, ಕ್ರೀಡಾ ಅಧ್ಯಕ್ಷರಾಗಿ ಪ್ರದೀಪ್ ಕುಂಬಳಚೇರಿ, ಕಾರ್ಯ ದರ್ಶಿಯಾಗಿ ದೀಪಕ್ ಮಜಿಕೋಡಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದಿವಾಕರ ಮಜಿಕೋಡಿ, ಮತ್ತು ಕಾರ್ಯಕಾರಿ ಮಂಡಳಿ ಸದಸ್ಯರು ಗಳಾಗಿ ದಿವಾಕರ ಮಜಿಕೋಡಿ, ಜಿತೇಂದ್ರ ಕೊಳಂಗಾಯ,ದೀಪಕ್ ಮಜಿಕೋಡಿ, ತಾರೇಶ್ ಕುಂಬಳಚೇರಿ, ಮಿಥುನ್ ಬಾಳೆಕಜೆ, ಪವನ್ ಕುಂಬಳಚೇರಿ, ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಪೆರಾಜೆ ವಯನಾಟ್ ಕುಲವನ್ ಸಭಾ ಭವನದಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾ ಯಿತು. ಸಭೆಯ ಅಧ್ಯಕ್ಷತೆಯನ್ನು ಶೀತಲ್ ಅವರು ವಹಿಸಿದ್ದರು. ಸಂಘದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ನಿಶಾಂತ್ ಮಜಿಕೋಡಿ ಮಂಡಿಸಿದರೆ, ವಾರ್ಷಿಕ ಲೆಕ್ಕಪತ್ರವನ್ನು ಖಜಾಂಚಿ ರಜತ್ ಮಂಡಿಸಿದರು. ಸಂಘದ ಒಂದು ವರ್ಷದ ಸಾಧನೆ ಹಾಗೂ ಮುಂದಿನ ಗುರಿ ಉದ್ದೇಶಗಳ ಬಗ್ಗೆ ಅಧ್ಯಕ್ಷ ಶೀತಲ್ ಹಾಗೂ ಸದಸ್ಯ ಜಗದೀಶ್ ಕುಂಬಳಚೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ದಿನದ ಲಘು ಉಪಾಹಾರವನ್ನು ಅರುಣ ಮಜಿಕೋಡಿ ನೀಡಿದರು. ದಿವಾಕರ ಮಜಿಕೋಡಿ ಸ್ವಾಗತಿಸಿ, ಭುವನ್ ಕುಂಬಳಚೇರಿ ವಂದಿಸಿದರು.

-ಕಿರಣ್ ಕುಂಬಳಚೇರಿ