ಕುಶಾಲನಗರ, ಸೆ. 10: ಇಲ್ಲಿನ ಲಕ್ಷ್ಮೀ ಹೆಲ್ತ್ ಕೇರ್‍ನಲ್ಲಿ ಮೈಸೂರಿನ ಅಪೊಲೊ ಆಸ್ಪತ್ರೆಯ ಹೃದಯ ತಜ್ಞೆ ಡಾ. ಸೌಮ್ಯಾ ಹಾಗೂ ಪಿಜಿಷಿಯನ್ ಡಾ. ಅನೂಜ್ ಅವರು ರೋಗಿಗಳ ತಪಾಸಣೆ ಮಾಡಿ ಸಲಹೆ ನೀಡಿದರು. ವೈದ್ಯರ ಸಲಹೆ ಮೇರೆಗೆ ಅಗತ್ಯವಿರುವ ಶಿಬಿರಾರ್ಥಿಗಳಿಗೆ ಇಸಿಜಿ, ಇಸಿಹೆಚ್‍ಒ ಪರೀಕ್ಷೆಗಳನ್ನು ನಡೆಸಲಾಯಿತು. ಎಸ್‍ಎಲ್‍ಆರ್ ಆಸ್ಪತ್ರೆ ಮೇಲ್ವಿಚಾರಕ ಶಬರೀಶ್, ರಾಕೇಶ್ ಉತ್ತಪ್ಪ, ಶುಶ್ರೂಷಕಿರಾದ ಲತಾ, ಅಂಜುಮ್, ಬಾನು, ತಂತ್ರಜ್ಞರಾದ ಸುನೀತಾ ಇದ್ದರು.