ಮಡಿಕೇರಿ, ಸೆ. 8: ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ 2018-19ನೇ ಸಾಲಿನ ಹಾಗೂ 52ನೇ ವಾರ್ಷಿಕ ಮಹಾಸಭೆ ಯೂನಿಯನ್ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಅಧ್ಯಕ್ಷತೆಯಲ್ಲಿ ಯೂನಿಯನ್ ಸಭಾಂಗಣದಲ್ಲಿ ನಡೆಯಿತು.

ಹಾಜರಿದ್ದ ಪ್ರತಿನಿಧಿಗಳು, ರೈತರ ಆರೋಗ್ಯ ಯೋಜನೆ, ಪ್ರಕೃತಿ ವಿಕೋಪ ಪರಿಹಾರದ ಬಗ್ಗೆ ಚರ್ಚೆ ನಡೆಸಿದರು. ಮನು ಮುತ್ತಪ್ಪ ಮಾತನಾಡಿ, ಯಶಸ್ವಿನಿ ಯೋಜನೆಯನ್ನು ಮುಂದುವರೆ ಸುವಂತೆ ಹಾಗೂ ಕೊಡಗು ಜಿಲ್ಲೆಯನ್ನು ಅತಿವೃಷ್ಟಿ ಪ್ರದೇಶವೆಂದು ಘೋಷಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವದೆಂದು ತಿಳಿಸಿದರು.

ವೇದಿಕೆಯಲ್ಲಿ ನಿರ್ದೇಶಕರಾದ ಎಸ್.ಪಿ. ನಿಂಗಪ್ಪ, ಪ್ರೇಮ ಸೋಮಯ್ಯ, ಹೆಚ್.ಎನ್. ರಾಮಚಂದ್ರ, ಬಿ.ಎ. ರಮೇಶ್ ಚಂಗಪ್ಪ, ಕೃಷ್ಣ ಗಣಪತಿ, ರವಿ ಬಸಪ್ಪ, ಕೆ.ಎಂ. ತಮ್ಮಯ್ಯ, ಪಿ.ಜಿ. ನಂಜುಂಡ, ಮನು ರಾಮಚಂದ್ರ, ಕನ್ನಂಡ ಸಂಪತ್ ಉಪಸ್ಥಿತರಿದ್ದರು. ಯೂನಿಯನ್ ಉಪಾಧ್ಯಕ್ಷ ಪಿ.ಸಿ. ಅಚ್ಚಯ್ಯ ಸ್ವಾಗತಿಸಿ, ನಿರ್ದೇಶಕ ಕೊಡಪಾಲು ಗಣಪತಿ ವಂದಿಸಿದರು.