ವೀರಾಜಪೇಟೆ, ಸೆ. 8: ವೈದ್ಯಕೀಯ ಕ್ಷೇತ್ರದಲ್ಲಿ ಪದವಿ ಪಡೆದ ದಂತ ವೈದ್ಯರುಗಳು ಗ್ರಾಮಾಂತರ ಪ್ರದೇಶಕ್ಕೆ ಆದ್ಯತೆ ನೀಡಿ ಬಡವರು ಕಡು ಬಡವರು ನಿರ್ಗತಿಕರಿಗೂ ಸೇವೆ ಸಲ್ಲಿಸುವಂತಾಗಬೇಕು. ವೈದ್ಯರ ಸೇವೆಯಲ್ಲಿ ಕರ್ತವ್ಯ ನಿಷ್ಠೆ ಪ್ರಾಮಾಣಿ ಕತೆಯನ್ನು ಮೆರೆಯುವಂತಾಗ ಬೇಕೆಂದು ನವದೆಹಲಿಯಲ್ಲಿರುವ ಭಾರತ ದಂತ ಪರಿಷತ್‍ನ ಸದಸ್ಯ ಡಾ. ಅನಿಲ್ ಕುಮಾರ್ ಚಂದ್ನ ಹೇಳಿದರು. ವೀರಾಜಪೇಟೆಯ ಮಗ್ಗುಲದಲ್ಲಿ ರುವ ಕೊಡಗು ದಂತ ಮಹಾ ವಿದ್ಯಾಲಯದ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪದವಿ ಪದಾನ ದಂತ ವೈದ್ಯ ಕಾಲೇಜುಗಳು ಅಖಿಲ ಭಾರತ ಮಟ್ಟದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದರೂ ಕಳೆದ ಸಾಲಿನಲ್ಲಿ 11,600 ಸೀಟುಗಳು ಹಾಗೆಯೇ ಉಳಿದಿವೆ. ದಂತ ವೈದ್ಯಕೀಯ ದಲ್ಲಿಯೂ ಪರಿಶ್ರಮ, ಸಂಶೋಧನೆ ಅಗತ್ಯ. ಕೊಡಗು ದಂತ ಮಹಾ ವಿದ್ಯಾಲಯವು ವಿದೇಶಗಳ ಐದು ಹೆಸರಾಂತ ವಿಶ್ವ ವಿದ್ಯಾಲಯಗ ಳೊಂದಿಗೆ ಒಡಂಬಡಿಕೆ ಮಾಡಿಕೊಂಡಿ ರುವದರಿಂದ ವಿದ್ಯಾ ಸಂಸ್ಥೆ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಹಾಗೆಯೇ ವಿದ್ಯಾರ್ಥಿಗಳ ಸಾಧನೆಯೂ ಹೆಚ್ಚಿದೆ ಎಂದರು.

ಕಾಲೇಜಿನ ಡೀನ್ ಪ್ರೊ:ಡಾ: ಸುನಿಲ್ ಮುದ್ದಯ್ಯ ಮಾತನಾಡಿ ಕೊಡಗು ದಂತ ವೈದ್ಯಕೀಯ ಕಾಲೇಜು ತನ್ನ ಎರಡು ದಶಕದ ಅವಧಿಯಲ್ಲಿ ಹೆಸರಾಂತ ದಂತ ವೈದ್ಯರುಗಳನ್ನು, ಉಪನ್ಯಾಸಕರು ಗಳನ್ನು ವಿಜ್ಞಾನಿಗಳನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿದೆ. ವಿದೇಶಿ ವಿಶ್ವ ವಿದ್ಯಾಲಯಗಳ ಒಡಂಬಡಿಕೆಯ ಫಲವಾಗಿ ಕೊಡಗು ದಂತ ವೈದ್ಯಕೀಯ ಕಾಲೇಜಿಗೆ ವಿಶ್ವ ವಿದ್ಯಾಲಯಗಳ ಸಂಶೋಧಕರು, ಹಿರಿಯ ಪ್ರಾಧ್ಯಾಪಕರುಗಳು ಭೇಟಿ ನೀಡುತ್ತ್ತಿದ್ದಾರೆ ಎಂದು ತಿಳಿಸಿದರು.

ಸಮಾರಂಭದಲ್ಲಿ 40 ಮಂದಿಗೆ ಪದವಿಗಳನ್ನು, 35 ಮಂದಿಗೆ ಸ್ನಾತಕೋತ್ತರ ಪದವಿಗಳನ್ನು ಪ್ರದಾನ ಮಾಡಲಾಯಿತು. ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಮೀಸಲಿರಿಸಿದ್ದ ಚಿನ್ನದ ಪದಕವನ್ನು ಡಾ. ಆರ್. ವೈಷ್ಣವಿ, ಕಂಜಿತಂಡ ಎಂ. ಕುಶಾಲಪ್ಪ ಚಿನ್ನದ ಪದಕವನ್ನು ಡಾ. ಕೀರ್ತನ ಬೊಳ್ಳಮ್ಮ, ಎಲ್ಲ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗಾಗಿ ಕೆ. ಪೊನ್ನಮ್ಮ ಕುಶಾಲಪ್ಪ ಚಿನ್ನದ ಪದಕವನ್ನು ಡಾ. ಪಾರ್ವತಿಗೆ ವಿತರಿಸಲಾಯಿತು. ಕಾಲೇಜಿನ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ಡಾ. ಅನ್‍ಮೋಲ್, ಡಾ. ಶಶಿಧರ್, ಡಾ. ಜಿತೇಂದ್ರ, ಪ್ರಾಂಶುಪಾಲ ಪ್ರೊ. ಕೆ.ಸಿ. ಪೊನ್ನಪ್ಪ ಉಪಸ್ಥಿತರಿದ್ದರು.

ಪದವಿ ಪ್ರದಾನ ಸಮಾರಂಭದ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.