ವೀರಾಜಪೇಟೆ, ಸೆ. 8: ವಿದ್ಯಾರ್ಜನೆಯೊಂದಿಗೆ ವಿದ್ಯಾರ್ಥಿಗಳು ಕ್ರೀಡೆಯಲ್ಲೂ ಸಕ್ರೀಯವಾಗಿ ತೊಡಗಿಸಿ ಕೊಳ್ಳಬೇಕು ಎಂದು ಅಂತರರಾಷ್ಟ್ರೀಯ ಕ್ರೀಡಾಪಟು ಎಂ. ಮಾಚಮ್ಮ ಹೇಳಿದರು.

ವೀರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಮುರುವಂಡ ನಂಜಪ್ಪ ಜಾÐಪಕಾರ್ಥ ನಡೆದ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವದರಿಂದ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂದರು.

ಅಧ್ಯಕ್ಷತೆಯನ್ನು ಕಾವೇರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಎ.ಸಿ. ಗಣಪತಿ ವಹಿಸಿ ಮಾತನಾಡಿದರು. ಕೊಡಗು ಜಿಲ್ಲಾ ಟೇಬಲ್ ಟೆನ್ನಿಸ್ ಸಂಸ್ಥೆಯ ಕಾರ್ಯದರ್ಶಿ ಎಂ. ರಚನ್ ಪೊನ್ನಪ್ಪ, ಪ್ರಾಂಶುಪಾಲೆ ಪ್ರೊ. ಎ.ಎಂ. ಕಮಲಾಕ್ಷಿ ಹಾಗೂ ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ. ನಾಣಯ್ಯ ವೇದಿಕೆಯಲ್ಲಿ ಇದ್ದರು.

ಸಮಾರಂಭದಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿರುವ ಕಾಲೇಜಿನ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ವಿಜೇತರು: ಪ್ರೌಢಶಾಲಾ ಬಾಲಕರ ವಿಭಾಗದ ಸಿಂಗಲ್ಸ್‍ನಲ್ಲಿ ಸಂತ ಅನ್ನಮ್ಮ ಶಾಲೆಯ ಜಶ್ವಂತ್ ಪ್ರಥಮ ಹಾಗೂ ಪ್ರತ್ವಿನ್ ದ್ವಿತೀಯ ಸ್ಥಾನ, ಡಬಲ್ಸ್‍ನಲ್ಲಿ ಸಂತ ಅನ್ನಮ್ಮ ಶಾಲೆಯ ಜಶ್ವಂತ್ ಮತ್ತು ಪ್ರತ್ವಿನ್ ಪ್ರಥಮ ಹಾಗೂ ಸಂತ ಅನ್ನಮ್ಮ ಶಾಲೆಯ ಶಾನ್ ಡಿಮೆಲ್ಲೊ ಮತ್ತು ಅಲೋಕ್ ಪಿ. ದಾಸ್ ದ್ವಿತೀಯ ಸ್ಥಾನ ಪಡೆದರು.

ಬಾಲಕಿಯರ ವಿಭಾಗದ ಸಿಂಗಲ್ಸ್‍ನಲ್ಲಿ ಕಾಲ್ಸ್ ಶಾಲೆಯ ರಿಹಾ ಶರ್ಮ ಪ್ರಥಮ ಸ್ಥಾನ, ದಿಯಾ ದ್ವಿತೀಯ ಸ್ಥಾನ ಹಾಗೂ ಡಬಲ್ಸ್‍ನಲ್ಲಿ ಕಾಲ್ಸ್ ಶಾಲೆಯ ಜೆಶಿಕಾ ಮತ್ತು ದಿಯಾ ಪ್ರಥಮ ಸ್ಥಾನ, ಸಂತ ಅನ್ನಮ್ಮ ಶಾಲೆಯ ಕ್ಲೆರಿಸ್ಟ ಮತ್ತು ಸಾನ್ವಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.

ಪದವಿ ಪೂರ್ವ ಕಾಲೇಜಿನ ಬಾಲಕರ ವಿಭಾಗದ ಸಿಂಗಲ್ಸ್‍ನಲ್ಲಿ ಕಾಪ್ಸ್ ಕಾಲೇಜಿನ ಈಶನ್ ಮುತ್ತಪ್ಪ ಪ್ರಥಮ ಹಾಗೂ ಮೂರ್ನಾಡು ಪದವಿ ಪೂರ್ವ ಕಾಲೇಜಿನ ಪುನಿತ್ ದ್ವಿತೀಯ ಸ್ಥಾನ, ಡಬಲ್ಸ್‍ನಲ್ಲಿ ಕಾಪ್ಸ್ ಕಾಲೇಜಿನ ಆನ್ಸೂಲ್ ಮತ್ತು ಈಶನ್ ಮುತ್ತಪ್ಪ ಪ್ರಥಮ ಸ್ಥಾನ ಹಾಗೂ ಮೂರ್ನಾಡು ಪದವಿ ಪೂರ್ವ ಕಾಲೇಜಿನ ರಕ್ಷಿತ್ ಮತ್ತು ಶಾಹಿದ್ ದ್ವಿತೀಯ ಸ್ಥಾನ ಪಡೆದುಕೊಂಡರು.

ಪದವಿ ಪೂರ್ವ ಕಾಲೇಜಿನ ಬಾಲಕಿಯರ ವಿಭಾಗದ ಸಿಂಗಲ್ಸ್‍ನಲ್ಲಿ ಸಂತ ಮೈಕಲ್ ಕಾಲೇಜಿನ ಇಶ ಪ್ರಥಮ, ಶ್ರದ್ಧ ದ್ವಿತೀಯ ಸ್ಥಾನ, ಡಬಲ್ಸ್‍ನಲ್ಲಿ ಸಂತ ಮೈಕಲ್ ಕಾಲೇಜಿನ ಇಶ ಮತ್ತು ಶ್ರದ್ಧ ಪ್ರಥಮ ಸ್ಥಾನ ಹಾಗೂ ವೀರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನ ಯಶಿಕ ಮತ್ತು ದೇಚಮ್ಮ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.

ಪದವಿ ಬಾಲಕರ ವಿಭಾಗದ ಸಿಂಗಲ್ಸ್‍ನಲ್ಲಿ ವೀರಾಜಪೇಟೆಯ ಕಾವೇರಿ ಪದವಿ ಕಾಲೇಜಿನ ಚೇತನ್ ಪ್ರಥಮ ಹಾಗೂ ಗಜೇಂದ್ರ ದ್ವಿತೀಯ ಸ್ಥಾನ, ಡಬಲ್ಸ್‍ನಲ್ಲಿ ಚೇತನ್ ಮತ್ತು ಮಿಥುನ್ ಪ್ರಥಮ ಸ್ಥಾನ ಹಾಗೂ ಗಜೇಂದ್ರ ಮತ್ತು ಅಜಿತ್ ದ್ವಿತೀಯ ಸ್ಥಾನ ಪಡೆದುಕೊಂಡರು.

ಪದವಿ ಬಾಲಕಿಯರ ವಿಭಾಗದ ಸಿಂಗಲ್ಸ್‍ನಲ್ಲಿ ವೀರಾಜಪೇಟೆಯ ಕಾವೇರಿ ಪದವಿ ಕಾಲೇಜಿನ ಅನುಷ ಪ್ರಥಮ, ಪೂಜಾ ದ್ವಿತೀಯ ಸ್ಥಾನ, ಡಬಲ್ಸ್‍ನಲ್ಲಿ ಅನುಷ ಮತ್ತು ಪೂಜಾ ಪ್ರಥಮ ಸ್ಥಾನ ಹಾಗೂ ದೇಚಮ್ಮ ಮತ್ತು ಚೋಂದಮ್ಮ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.

ಸಾರ್ವಜನಿಕ ಪುರುಷರ ವಿಭಾಗದ ಸಿಂಗಲ್ಸ್‍ನಲ್ಲಿ ಮಂಜುನಾಥ್ ಪ್ರಥಮ, ರಚನ್ ದ್ವಿತೀಯ ಸ್ಥಾನ, ಡಬಲ್ಸ್‍ನಲ್ಲಿ ಮಂಜುನಾಥ್ ಮತ್ತು ರಾಮ್‍ದೇವ್ ಪ್ರಥಮ ಸ್ಥಾನ ಹಾಗೂ ರಚನ್ ಪೊನ್ನಪ್ಪ ಮತ್ತು ಪ್ರಜ್ವಲ್ ದ್ವಿತೀಯ ಸ್ಥಾನ ಪಡೆದುಕೊಂಡರು.

ಮಹಿಳೆಯರ ವಿಭಾಗದ ಸಿಂಗಲ್ಸ್‍ನಲ್ಲಿ ರೀನಾ ಅನಿಲ್ ಪ್ರಥಮ, ನಮಿತಾ ಚಂಗಪ್ಪ ದ್ವಿತೀಯ ಸ್ಥಾನ, ಡಬಲ್ಸ್‍ನಲ್ಲಿ ಶಾಂತಿ ಮತ್ತು ಕವಿತಾ ಸತ್ಯಮೂರ್ತಿ ಪ್ರಥಮ ಸ್ಥಾನ ಹಾಗೂ ನಮಿತಾ ಚಂಗಪ್ಪ ಮತ್ತು ಪೂಜಾ ಕುಟ್ಟಪ್ಪ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.